ಲೂಸ್ ಮಾದ ಯೋಗೇಶ್, ಡಾ.ರಾಜ್ ರಂತೆ: ಮಿಮಿಕ್ರಿ
ಕಳೆದ ವಾರ ನಡೆದ 'ಸಿದ್ಲಿಂಗು' ಆಡಿಯೋ ಬಿಡುಗಡೆ ಕಾರ್ಯಕ್ರಮ ಹಲವು ಕಾರಣಗಳಿಂದ ಗಮನ ಸೆಳೆಯಿತು. ಅದರಲ್ಲೊಂದು, ಲೂಸ್ ಮಾದ ಯೋಗೇಶ್ ರನ್ನು ವರನಟ ಡಾ. ರಾಜ್ ಕುಮಾರ್ ಗೆ ಹೋಲಿಸಿದ್ದು. ಹೇಳಿದ್ದು ಮಿಮಿಕ್ರಿ ದಯಾನಂದ್.
ಟಿ. ಪಿ. ಸಿದ್ದರಾಜು ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಮೂರನೆಯ ಚಿತ್ರ ಸಿದ್ಲಿಂಗು. ಹಾಗಾಗಿ ಚಿತ್ರತಂಡದವರ ಬೇಡಿಕೆಗಳನ್ನು ಸ್ವತಃ ಯೋಗೇಶ್ ನೋಡಿಕೊಳ್ಳುತ್ತಿದ್ದರಂತೆ. ಮಿಮಿಕ್ರಿ ದಯಾನಂದ್ ಈ ವಿಷಯಕ್ಕೆ ಸಂಬಂಧಿಸಿದಂತೆ " ಹೀಗೆ ಹೇಳಿದ್ದಾರೆ.
"ಹೋಮ್ ಬ್ಯಾನರ್ ಚಿತ್ರಗಳಲ್ಲಿ ನಟಿಸುವಾಗ, ಡಾ. ರಾಜ್‌ಕುಮಾರ್ ಅವರು ಚಿತ್ರತಂಡದ ಬೇಕು-ಬೇಡಗಳನ್ನು ಸ್ವತಃ ನೋಡಿಕೊಳ್ಳುತ್ತಿದ್ದರು. ಚಿತ್ರೀಕರಣ ನಡೆಯುವ ಅಷ್ಟೂ ದಿನ ಪ್ರತಿಯೊಬ್ಬ ಕಲಾವಿದರ ಮತ್ತು ತಂತ್ರಜ್ಞರ ಕೊಠಡಿಗಳಿಗೆ ಹೋಗಿ ಏನಾದರೂ ಸಮಸ್ಯೆಗಳಿವೆಯೇ ಎಂದು ವಿಚಾರಿಸುತ್ತಿದ್ದರು.
ಅದೇ ರಾಜ್ ಗುಣಗಳು ಯೋಗಿಯಲ್ಲಿ ಕಾಣುತ್ತಿವೆ. ಕಲಾವಿದರು, ತಂತ್ರಜ್ಞರನ್ನು ರಾಜಣ್ಣ ನೋಡಿಕೊಳ್ಳುತ್ತಿದ್ದ ರೀತಿಯಲ್ಲೇ ಯೋಗಿ ಕೂಡ ನೋಡುತ್ತಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ದೊಡ್ಡ ಗುಣಗಳನ್ನು ಅವರು ರೂಢಿಸಿಕೊಂಡಿದ್ದಾರೆ" ಎಂದರು. ಮಿಮಿಕ್ರಿ ದಯಾನಂದ್ ಹೇಳಿದ ಮಾತಾದ್ದರಿಂದ ಎಲ್ಲರೂ ಅದನ್ನು 'ಮಿಮಿಕ್ರಿ' ಅಂತ ಅಂದುಕೊಂಡಿದ್ದಾರೆ ಎಂಬುದು ಅಲ್ಲಿ ಇರದಿದ್ದವರ ಮಾತು. (ಒನ್ ಇಂಡಿಯಾ ಕನ್ನಡ)


Click it and Unblock the Notifications











