ಅನುಷ್ಕಾ ಶೆಟ್ಟಿ ಕೆಂದುಟಿಗಳಿಗೆ ಸುರೂಪಿ ಶಸ್ತ್ರಚಿಕಿತ್ಸೆ
ತುಟಿಗಳು ತೊಂಡೆಹಣ್ಣಿನಂತಿರಬೇಕು ಎಂದು ಸೌಂದರ್ಯಪ್ರಜ್ಞೆ ಇರುವವ ಮಹಿಳೆಯರೆಲ್ಲಾ ಬಯಸುತ್ತಾರೆ. ಇನ್ನು ಸಿನಿಮಾ ತಾರೆಗಳೆಂದರೆ ಕೇಳಬೇಕೆ. ಬೆಂಗಳೂರು ಹುಡುಗಿ ಕಮ್ ಸಿನಿಮಾ ತಾರೆ ಅನುಷ್ಕಾ ಶೆಟ್ಟಿ ಬಾಡಿಹೋದ ತೊಂಡೆಹಣ್ಣಿನಂತಾದ ತನ್ನ ತುಟಿಗಳಿಗೆ ಮರುಜೀವ ನೀಡಲು ಹೊರಟಿದ್ದಾರೆ. ಆಕೆ ಈಗ ತನ್ನ ಕೆಂದುಟಿಗಳಿಗೆ ಸುರೂಪಿ ಶಸ್ತ್ರಚಿಕಿತ್ಸೆ ಮಾಡಿಸಲು ಮುಂದಾಗಿದ್ದಾರೆ.
ಬೆಳ್ಳಿ ಪರದೆಗೆ ಆಗಮಿಸುವುದಕ್ಕೂ ಮುನ್ನ ಈಕೆ ಯೋಗ ಟೀಚರ್ ಆಗಿದ್ದರು. ಹಾಗಾಗಿ ಸಿಂಹಕಟಿಯಂತಹ ಸೊಂಟ, ಹಂಸದಂತಹ ನಡಿಗೆ ಆಕೆಗೆ ಸಿದ್ಧಿಸಿತ್ತು. ನಿರ್ಜೀವವಾಗಿರುವ ತುಟಿಗಳಿಗೆ ಜೀವ ನೀಡಲು ಈಗ ಆಕೆ ಸುರೂಪಿ ಚಿಕಿತ್ಸೆಗೆ ಮೊರೆಹೋಗಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿರುವ ಈಕೆ ಚಿತ್ರವೊಂದಕ್ಕೆ ರು.1 ಕೋಟಿ ಸಂಭಾವನೆ ಎಣಿಸುತ್ತಾರೆ. ತುಟಿಗಳ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಸೊಂಟದ ಸುತ್ತಳತೆಯನ್ನೂ ಕಡಿಮೆ ಮಾಡಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.
More from Filmibeat
English summary
Anushka Shetty, the hot actress of South Cinema is decided to undergo liposuction to correct her lips shape. She will announce a short break soon and go for the treatment, sources said.
ಜೀವನ ಶೈಲಿ ಅನುಷ್ಕಾ ಶೆಟ್ಟಿ ಸೌಂದರ್ಯ ತುಟಿ ಆರೋಗ್ಯ ಯೋಗ ಶಸ್ತ್ರಚಿಕಿತ್ಸೆ anushka shetty beauty tips life style lips health yoga


Click it and Unblock the Notifications











