ವಿವೇಕ್ ಒಬೆರಾಯ್ ಪತ್ನಿ ವಿರುದ್ಧ ವಂಚನೆ ಆರೋಪ

By Rajendra

Priyanka Alva
ಬಾಲಿವುಡ್ ಜನಪ್ರಿಯ ನಟ ವಿವೇಕ್ ಒಬೆರಾಯ್ ಅವರ ಪತ್ನಿ ಹಾಗೂ ದಿ.ಜೀವರಾಜ್ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವ ಹಾಗೂ ಅವರ ತಾಯಿ ನಂದಿನಿ ಆಳ್ವ ವಿರುದ್ಧ ಬೆಂಗಳೂರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ನಂದಿನಿ ಆಳ್ವ ಹಾಗೂ ಪ್ರಿಯಾಂಕಾ ಆಳ್ವ ಅವರ ಎಎಲ್‌ವಿ ಪ್ರಾಜೆಕ್ಟ್ ಸಂಸ್ಥೆಯಲ್ಲಿ 2007ರಿಂದ ಎನ್ ವಿನೋದ್ ಎಂಬುವವರು ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ತಮಗೆ ರು.75 ಲಕ್ಷ ವಂಚಿಸಲಾಗಿದೆ ಎಂದು ಆಳ್ವ ಕುಟುಂಬದ ವಿರುದ್ಧ 4ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸ ದೂರು ನೀಡಿದ್ದರು.

ಈ ದೂರಿನ ವಿಚಾರಣೆ ನಡೆಸಿರುವ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುವಂತೆ ಸದಾಶಿವನಗರ ಪೊಲೀಸರಿಗೆ ನಿರ್ದೇಶಿಸಿದೆ. ಅದರ ಪ್ರಕಾರ, ನಂದಿನಿ ಆಳ್ವ, ಪ್ರಿಯಾಂಕಾ ಆಳ್ವ, ಸಂಸ್ಥೆಯ ವ್ಯವಸ್ಥಾಪಕ ನೀಲೋಸರ್ ಹಮೀದ್ ವಿರುದ್ಧ ಐಪಿಸಿ 120 ಬಿ, 420 ಹಾಗೂ 406 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಆಳ್ವ ಅವರ ಎಎಲ್‌ವಿ ಪ್ರಾಜೆಕ್ಟ್ ಕಂಪನಿಯು ಮೂಲ ವಾರಸುದಾರರಿಂದ ಭೂಮಿ ಖರೀದಿಸಿ ಮತ್ತೊಂದು ಕಂಪನಿಗೆ ಮಾರಾಟ ಮಾಡುತ್ತಿತ್ತು. ಹೀಗೆ ಮಾರಾಟ ಮಾಡುತ್ತಿದ್ದ ಜಮೀನಿನ ಮೂಲ ವಾರಸುದಾರರಿಂದ ಭೂ ದಾಖಲೆಗಳನ್ನು ಪರಿಶೀಲಿಸಿ ಆಳ್ವ ಹೆಸರಿಗೆ ನೋಂದಣಿ ಮಾಡಿಸುವ ಕೆಲಸವನ್ನು ಎನ್ ವಿನೋದ್ ಮಾಡುತ್ತಿದ್ದರು. ಹೀಗೆ ಕಾನೂನು ಸಲಹೆ ನೀಡಲು ರು.75 ಲಕ್ಷ ಶುಲ್ಕ ನೀಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಂದಿನಿ ಆಳ್ವ ಅವರು ಆ ಹಣವನ್ನು ನೀಡದೆ ವಂಚಿಸಿದ್ದಾರೆ ಎಂದು ವಿನೋದ್ ದೂರು ನೀಡಿದ್ದಾರೆ. (ಏಜೆನ್ಸೀಸ್)

More from Filmibeat

English summary
The Sadashivanagar police have registered criminal cases against noted dancer Nandini Alva, her daughter Priyanka Alva and N Hameed the marketing manager of their company, ALV Project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X