»   » ಹ್ಯಾಪಿ ಬರ್ತ್ ಡೇ ದೀಪಿಕಾ; ಇನ್ನಾದರೂ ಬಿಡಿ ಈ ಬಿಂಕ

ಹ್ಯಾಪಿ ಬರ್ತ್ ಡೇ ದೀಪಿಕಾ; ಇನ್ನಾದರೂ ಬಿಡಿ ಈ ಬಿಂಕ

Posted By:
Subscribe to Filmibeat Kannada

ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಪ್ಪತ್ತೈದಕ್ಕೆ ಅಡಿಯಿಟ್ಟಿದ್ದು ತಮ್ಮ ಹುಟ್ಟುಹಬ್ಬವನ್ನು ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಯ ಜೊತೆ ಯೂರೋಪ್‌ನಲ್ಲಿ ಆಚರಿಸಿಕೊಂಡಿದ್ದಾರೆ. 2010ನೇ ವರ್ಷ ದೀಪಿಕಾ ಪಾಲಿಗೆ ಆಶಾದಾಯಕವಾಗಿಯೇನು ಇರಲಿಲ್ಲ. ಆಕೆ ಅಭಿನಯಿಸಿದ ಐದು ಚಿತ್ರಗಳಲ್ಲಿ ನಾಲ್ಕು ಮಕಾಡೆ ಮಲಗಿವೆ.

ಸೋಲೆ ಗೆಲುವಿನ ಸೋಪಾನ ಎಂಬಂತೆ ದೀಪಿಕಾ ಪಾಠ ಕಲಿತಿದ್ದಾರಂತೆ. ತನ್ನ ಮಾಜಿ ಪ್ರಿಯತಮ ರಣಬೀರ್ ಕಪೂರ್‌ಗೆ ಕಾಂಡೋಮ್ ಉಡುಗೊರೆಯಾಗಿ ನೀಡುವುದಾಗಿ ಹೇಳಿ ಭಾರಿ ಸುದ್ದಿ ಮಾಡಿದ್ದು ದೀಪಿಕಾರ ಈ ವರ್ಷದ ಸಾಧನೆ ಎನ್ನಬಹುದು. ಸಿದ್ಧಾರ್ಥ್ ಮಲ್ಯ ಜೊತೆ ಡ್ಯುಯೆಟ್ ಹಾಡುತ್ತಾ ದೀಪಿಕಾ ಯೂರೋಪ್ ಪ್ರವಾಸದಲ್ಲಿದ್ದಾರೆ.

ತಾವು ಕರ್ನಾಟಕ ಮೂಲದವರು ಎಂದು ಹೇಳಿಕೊಳ್ಳಲು ದೀಪಿಕಾಗೆ ಅದ್ಯಾಕೋ ಏನೋ ಮೊದಲಿನಿಂದಲೂ ಅಳುಕು. ಹಾಗೆಯೇ ತಾವು ಅಭಿನಯಿಸಿದ ಮೊದಲ ಚಿತ್ರ ಕನ್ನಡದ 'ಐಶ್ವರ್ಯ' ಎಂದು ಹೇಳಿಕೊಳ್ಳಲು ಆಕೆ ಹಿಂದೇಟು ಹಾಕುತ್ತಾರೆ. ಈ ವರ್ಷವಾದರೂ ದೀಪಿಕಾ ಈ ಎಲ್ಲಾ ಹಿಂಜರಿಕೆಗಳಿಂದ ಹೊರಬರಲಿ ಎಂದು ಹಾರೈಸೋಣ. [ದೀಪಿಕಾ ಪಡುಕೋಣೆ]

English summary
Bollywood actress Deepika Padukone celebrates 25th birthday on Jan 5th. She is on a backpacking trip through Europe along with her boyfriend Siddharth Mallya. 2010 was an eventful year for Deepika with as many as five releases.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X