ಕಂಠೀರವ ಸ್ಟೂಡಿಯೋದಲ್ಲಿ 'ಐ.ಪಿ.ಸಿ ಸೆಕ್ಷನ್ 300'

ನ್ಯಾಯಾಲಯದ ಆವರಣದಲ್ಲಿ ಸ್ನೇಹಿತನೊಂದಿಗೆ ವಿಜಯರಾಘವೇಂದ್ರ ಸಂಭಾಷಣೆಯಲ್ಲಿ ನಿರತರಾಗಿದ್ದಾಗ, ಸ್ನೇಹಿತನಿಗೆ ಕ್ರಿಮನಲ್ ಕೇಸಿನ ವಕಾಲತ್ತು ವಹಿಸಲು ಕರೆ ಬರುತ್ತದೆ. ಕರೆಯನ್ನು ಸ್ವೀಕರಿಸಿದ ಗೆಳೆಯ, 'ನನಗೆ ಈಗ ಸಾಕಷ್ಟು ಕೆಲಸವಿದೆ. ಹಾಗಾಗಿ ಈ ಕ್ರಿಮಿನಲ್ ಕೇಸಿನ ವಕಾಲತ್ತನ್ನು ನೀನೆ ವಹಿಸು ಎಂದು ವಿಜಯ್ ರಾಘವೇಂದ್ರರ ಬಳಿ ಹೇಳುವ ಸನ್ನಿವೇಶವನ್ನು ನಗರದ ಶ್ರೀಕಂಠೀರವ ಸ್ಟೂಡಿಯೋದಲ್ಲಿ ನಿರ್ದೇಶಕರು ಚಿತ್ರೀಕರಿಸಿಕೊಂಡರು. ಈ ಭಾಗದ ಚಿತ್ರೀಕರಣದಲ್ಲಿ ನಾಯಕ ವಿಜಯರಾಘವೇಂದ್ರ ಹಾಗೂ ಸಹ ಕಲಾವಿದರು ಪಾಲ್ಗೊಂಡಿದ್ದರು.
'ಐ.ಪಿ.ಸಿ ಸೆಕ್ಷನ್ 300 ಚಿತ್ರಕ್ಕೆ ಶಶಿಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀರಸಮರ್ಥ್ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆಯಿರುವ ಚಿತ್ರದಲ್ಲಿ ವಿಜಯರಾಘವೇಂದ್ರ, ಪ್ರಿಯಾಂಕ, ದೇವರಾಜ್, ಸುಮನ್ ರಂಗನಾಥ್, ಸೃಜನ್ ಲೋಕೇಶ್, ಶಂಕರ್, ಮುನಿ, ರವೀಂದ್ರನಾಥ್ ಅಭಿನಯಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಐಪಿಸಿ ಸೆಕ್ಷನ್ 300ರಲ್ಲಿ ವಿಜಯ ರಾಘವೇಂದ್ರ
'ಜೊತೆಗಾರ'ನಿಗೆ ರು.1.50 ಲಕ್ಷ ಬಿಟ್ಟುಕೊಟ್ಟ ರಮ್ಯಾ!
ವಿಜಯ್ ರಾಘವೇಂದ್ರನಿಗೆ ಡಬಲ್ ಖುಷಿ


Click it and Unblock the Notifications











