»   »  ಬಿರುಸಿನ ಚಟುವಟಿಕೆಗಳ ತಾಣವಾದ ಗಾಂಧಿನಗರ

ಬಿರುಸಿನ ಚಟುವಟಿಕೆಗಳ ತಾಣವಾದ ಗಾಂಧಿನಗರ

Subscribe to Filmibeat Kannada
Prajwal Devraj
ಕನ್ನಡ ಚಿತ್ರೋದ್ಯಮಕ್ಕೆ ನೀಡಲಾಗಿದ್ದ 15 ದಿನಗಳ ರಜೆ ಮುಗಿದಿದೆ. ಗಾಂಧಿನಗರ ಈಗ ಬಿರುಸಿನ ಚಟುವಟಿಕೆಗಳ ತಾಣವಾಗಿದೆ. ಅಮೃತ ಮಹೋತ್ಸವದ ಪೂರ್ವ ತಯಾರಿಗಾಗಿ ಫೆಬ್ರವರಿ 17 ರಿಂದ ಮಾರ್ಚ್ 3 ರವರೆಗೆ ಚಿತ್ರೋದ್ಯಮಕ್ಕೆ ರಜೆ ಘೋಷಿಸಲಾಗಿತ್ತು.

ಈಗಾಗಲೇ ಆರಂಭಗೊಂಡಿದ್ದ ಚಿತ್ರಗಳ ಚಿತ್ರೀಕರಣ, ಹೊಸ ಚಿತ್ರಗಳ ಆರಂಭ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಜೀವ ಪಡೆದಿವೆ. ಪ್ರಸನ್ನ ಕುಮಾರ್ ಮತ್ತು ಬಸವರಾಜಪ್ಪ ನಿರ್ಮಿಸುತ್ತಿರುವ 'ಹುಚ್ಚು ಹುಡುಗಿ' ಚಿತ್ರ ಸೆಟ್ಟೇರಿದೆ. ಈ ಚಿತ್ರದ ನಿರ್ದೆಶಕ ಕುರುಡಿ ಬಣಕಾರ್. ಸಾಹಿತ್ಯ, ಸಂಗೀತ ಗಂಧರ್ವ. ರವಿ, ದಿವ್ಯಶ್ರೀ ಎಂಬ ಹೊಸ ಮುಖಗಳು ನಾಯಕ-ನಾಯಕಿ. ರಾಮಕೃಷ್ಣ, ಸಂಗಮೇಶ್, ರವಿತೇಜ, ಸತ್ಯಜಿತ್, ಡಿಂಗ್ರಿ ನಾಗರಾಜ್, ಬಿರಾದಾರ್ ತಾರಾಗಣದಲ್ಲಿದ್ದಾರೆ.

ಪ್ರಜ್ವಲ್ ದೇವರಾಜ್, ರಾಧಿಕಾ ಪಂಡಿತ್ ಅಭಿನಯದ 'ಸೂಪರ್ ಮ್ಯಾನ್'ಚಿತ್ರವೂ ಚಾಲನೆ ಪಡೆದುಕೊಂಡಿದೆ. ರಘುದೀಕ್ಷಿತ್ ಸಂಗೀತ ಸಂಯೋಜನೆಯ ಚಿತ್ರ. ಚಂದ್ರಶೇಖರ್ ನಿರ್ಮಾಣ, ಪ್ರಭಾಕರ್ ನಿರ್ದೇಶನ. ಇದರ ಜತೆಗೆ ಬಿ ಸಿ ಪಾಟೀಲರ 'ಸೆಲ್ಯೂಟ್', ವಿಜಯ್, ಸುದೀಪ್ ಚಿತ್ರಗಳು ಚಿತ್ರೀಕರಣಲ್ಲಿ ಬ್ಯುಸಿಯಾಗಿವೆ. ಯುಗಾದಿ ಹಬ್ಬಕ್ಕೆ ಮತ್ತಷ್ಟು ಚಿತ್ರಗಳು ಸೆಟ್ಟೇರುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಕನ್ನಡ ಚಿತ್ರೋದ್ಯಮ ಈಗ ಬಿರುಸಿನ ಚಟುವಟಿಕೆಗಳ ತಾಣವಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಕನ್ನಡ ಚಿತ್ರಗಳ ಸೋಲು, ಗೆಲುವು ಮತ್ತು ಸವಾಲು
ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು
ಸ್ವಮೇಕ್ ನಲ್ಲಿ ಸುದೀಪ್, ರೀಮೇಕ್ ನಲ್ಲಿ ವಿಜಯ್

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada