»   » ಗ್ರೀಸ್ನಲ್ಲಿ ಬಿರುಗಾಳಿ; ನಿಷೇಧಾಜ್ಞೆಗೆ ತಾಂತ್ರಿಕ ಸ್ಪರ್ಶ

ಗ್ರೀಸ್ನಲ್ಲಿ ಬಿರುಗಾಳಿ; ನಿಷೇಧಾಜ್ಞೆಗೆ ತಾಂತ್ರಿಕ ಸ್ಪರ್ಶ

Subscribe to Filmibeat Kannada

ದಕ್ಷಿಣ ಯುರೋಪಿನ ಸುಪ್ರಸಿದ್ದ ದೇಶ ಗ್ರೀಸ್. ಈ ದೇಶದಲ್ಲಿ ಬಿರುಗಾಳಿ ಹಾಡಾಗಿ ಬೀಸಲಿದೆ ಸೆಪ್ಟಂಬರ್ ಮೊದಲವಾರದಲ್ಲಿ, ಆದರ್ಶ ಎಂಟರ್ ಪ್ರೈಸಸ್ ಅವರ ನಿರ್ಮಾಣದ ಬಿರುಗಾಳಿ ಚಿತ್ರದ ಎರಡು ಗೀತೆಗಳು ನಾಯಕ ಚೇತನ್ ಹಾಗೂ ನಾಯಕಿಯರಾದ ಸಿತಾರವೈದ್ಯ, ಕರೀಷ್ಮಾ ಅವರ ಅಭಿನಯದಲ್ಲಿ ಚಿತ್ರೀಕೃತವಾಗಲಿದೆ. ಹತ್ತು ದಿನಗಳ ಚಿತ್ರೀಕರಣಕ್ಕೆ ತಂಡ ಈಗಾಗಲೇ ಆ ದೇಶಕ್ಕೆ ತೆರಳಿದೆ.

ಮಾತಿನ ಭಾಗದ ಚಿತ್ರೀಕರಣಕ್ಕೆ ಮಾತುಗಳ ಜೋಡಣೆ ಪ್ರಕ್ರಿಯೆ ಸಂಪೂರ್ಣವಾಗಿದ್ದು ಮುಂದಿನ ಚಟುವಟಿಕೆಗಳು ಪ್ರಗತಿಯಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ನಿರ್ದೇಶಕರೇ ಕತೆ, ಚಿತ್ರಕತೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಬಿರುಗಾಳಿಗೆ ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ಅರ್ಜುನ್ ಸಂಗೀತ, ಡಿಫ಼ರೆಂಟ್ ಡ್ಯಾನಿ ಸಾಹಸ, ದೀಪು ಎಸ್ ಕುಮಾರ್ ಸಂಕಲನ, ಯೋಗಾನಂದ್ ಸಂಭಾಷಣೆ, ಜಯಂತ ಕಾಯ್ಕಿಣಿ, ಕವಿರಾಜ್, ಹೃದಯಶಿವ ಗೀತರಚನೆ, ಮಹೇಶ್, ಯೋಗಿ ಸಹನಿರ್ದೆಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಚೇತನ್, ಸಿತಾರಾವೈದ್ಯ, ಕರೀಷ್ಮಾ, ಕಿಶೋರ್, ಮೈಕೋನಾಗರಾಜ್, ಪರಮೇಶಿ, ಕುರಿಗಳು ಪ್ರಸಾದ್, ಗಿರಿ, ಪವನ್ ಮುಂತಾದವರಿದ್ದಾರೆ.

**********
ತಾಂತ್ರಿಕ ಸೊಬಗಿನಲ್ಲಿ ನಿಷೇಧಾಜ್ಞೆ
ಶಬ್ದಗ್ರಹಣ ಕೂಡ ಚಿತ್ರದ ಪ್ರಮುಖಾಂಶಗಳಲ್ಲಿ ಒಂದು. ಇತ್ತೀಚೆಗೆ ಬಿಡುಗಡೆಯಾದ ಫೂಂಕ್ ಹಿಂದಿ ಚಿತ್ರ ವಿಶಿಷ್ಟ ಶಬ್ದಗ್ರಹಣಕ್ಕೆ ಉತ್ತಮ ಉದಾಹರಣೆ. ನಮ್ಮ ಚಿತ್ರದಲ್ಲೂ ಉತ್ತಮ ರೀತಿಯ ಸೌಂಡ್ ಎಫೆಕ್ಟ್ ಇರಬೇಕೆಂಬ ಇರಾದೆ ಇಟ್ಟುಕೊಂಡಿರುವ ನಿರ್ದೇಶಕ ಪದ್ಮನಾಭ ಆರ್.ಟಿ.ನಗರದ ಸ್ಪೆಷೆಲ್‌ಎಫೆಕ್ಟ್ ರಾಜನ್ ಅವರ ಸ್ಟೂಡಿಯೋದಲ್ಲಿ ನಿಷೇಧಾಜ್ಞೆ ಗೆ ಶಬ್ದಗ್ರಹಣ ಕಾರ್ಯ ನೆರವೇರಿಸುತ್ತಿದ್ದಾರೆ.

ಭರತ್‌ಬಾಬು ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ವಿ.ನಾರಾಯಣಸ್ವಾಮಿ ಹಾಗೂ ಸೂರ್ಯಕಾಂತ್ ಜಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪದ್ಮನಾಭ ಅವರು ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಗಿರಿಧರ್ ಸಂಗೀತ, ರಮೇಶ್ ಕ್ಯಾಮೆರಾ, ಯತೀಶ್ ಕುಮಾರ್ ಸಂಕಲನ, ಲಕ್ಷ್ಮೀಕುಮಾರ್ ಸಹನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಆದಿಲೋಕೇಶ್, ಭರತ್‌ಬಾಬು, ಪ್ರಿಯಾಂಕ, ನೀನಾಸಂಅಶ್ವತ್, ಪದ್ಮಜಾರಾವ್, ಸುರೇಶ್‌ಮಂಗಳೂರು, ಸ್ನೇಹಾಜಗದೀಶ್ ಮುಂತಾದವರಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿ ಅಬ್ದುಲ್‌ಅಜೀಂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.

(ದಟ್ಸ್ ಕನ್ನಡ ಸಿನಿವಾರ್ತೆ)
ಬಿರುಗಾಳಿಯಲ್ಲಿ ಐ ಲವ್ ಯೂ ಗೀತೆಗೆ ಚೇತನ್ ನೃತ್ಯ
ರೀಲ್ ಕಾಪ್ ಆದಿಗೆ ರಿಯಲ್ ಕಾಪ್ ಗಳ ಪ್ರಶಂಸೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada