ಮುಂಬೈ ಕನ್ನಡಿಗರು ಸೇರಿ ನಿರ್ಮಿಸಿರುವ ಚಿತ್ರ ಕಾರ್ತಿಕ್
ಯುವ ನಾಯಕ ಕಾರ್ತಿಕ್ ಶೆಟ್ಟಿ ಅಭಿನಯದ 'ಕಾರ್ತಿಕ್' ಚಿತ್ರದ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿದೆ. ಸತೀಶ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸುಧಾ ಬೆಳವಾಡಿ, ಅವಿನಾಶ್, ಕುರಿ ಸುನಿಲ್ ಮುಂತಾದವರ ತಾರಾಗಣವಿದೆ. ಈ ಚಿತ್ರದಲ್ಲಿ ಕಾರ್ತಿಕ್ ಶೆಟ್ಟಿಗೆ ಜೊತೆಯಾಗಿ ಅರ್ಚನಾ ಗುಪ್ತಾ ನಟಿಸಿದ್ದಾರೆ.
ಸದ್ಯ ಡಬ್ಬಿಂಗ್ ಮುಗಿಸಿರುವ ಈ ಚಿತ್ರ ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಗೊಳ್ಳುವ ಸೂಚನೆಯಿದೆ.ಈ ಚಿತ್ರದಲ್ಲಿ ನಾಯಕ ಕಾರ್ತಿಕ್ ಶೆಟ್ಟಿ ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್ ಇಲ್ಲದೇ ಪಾಲ್ಗೊಂಡಿದ್ದಾರೆ. ನಂಜುಂಡಿ ನಾಗರಾಜ್ ಸಾಹಸ ಸಂಯೋಜನೆಯ ಈ ಚಿತ್ರ ವಿಭಿನ್ನ ರೀತಿಯಲ್ಲಿ ಮೂಡಿಬಂದಿದೆ.
ಮುಂಬೈನಲ್ಲಿ ನೆಲೆಸಿರುವ ಕನ್ನಡಿಗರೇ ಸೇರಿ ನಿರ್ಮಿಸಿರುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದಾಪುಗಾಲಿಡುವ ಎಲ್ಲ ತಯಾರಿಯನ್ನೂ ಮಾಡಿದೆ.ಯಶೋಧ ಮೂವೀಟೋನ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ.
ಮುಂಬೈ ಕನ್ನಡಿಗ ಕಾರ್ತಿಕ್ ಕಾರ್ತಿಕ್ ಶೆಟ್ಟಿ ಅರ್ಚನಾ ಗುಪ್ತ ಅವಿನಾಶ್ karthik karthik shetty mumbai kannadiga archana gupta avinash


Click it and Unblock the Notifications