»   » ಲೀಲಾವತಿಗೆ ತುಮಕೂರು ವಿವಿಯ ಡಾಕ್ಟರೇಟ್

ಲೀಲಾವತಿಗೆ ತುಮಕೂರು ವಿವಿಯ ಡಾಕ್ಟರೇಟ್

Subscribe to Filmibeat Kannada
Leelavathi with her son
ಕೆಲ ವರ್ಷಗಳ ಹಿಂದೆ ಕೆ.ಎಸ್.ಅಶ್ವಥ್ ಅವರಿಗೆ ತುಮಕೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ನಮ್ಮ ಪ್ರಣಯರಾಜ ಶ್ರೀನಾಥ್ ಅವರಿಗೂ ವಿದೇಶಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು. ಈಗ ಆ ಸಾಲಿಗೆ ಕನ್ನಡಚಿತ್ರರಂಗ ಒಂದು ಕಾಲದ ಖ್ಯಾತ ತಾರೆ ಲೀಲಾವತಿ ಅವರು ಸೇರ್ಪಡೆಯಾಗಿದ್ದಾರೆ.

ಲೀಲಾವತಿ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿರುವುದಾಗಿ ತುಮಕೂರು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಓ.ಅನಂತರಾಮಯ್ಯ ಗುರುವಾರ ಪ್ರಕಟಿಸಿದ್ದಾರೆ. ಎಂಟು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಈ ಬಾರಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಜನವರಿ 9, 2008ರ ತುಮಕೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಲೀಲಾವತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತ್ತದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್,ಡಾ.ಬಿ.ಸರೋಜಾದೇವಿ, ಡಾ.ಕೆ.ಎಸ್.ಅಶ್ವಥ್, ಡಾ.ಜಯಮಾಲಾ, ಡಾ.ಶ್ರೀನಾಥ್ ಗೌರವ ಡಾಕ್ಟರೇಟ್ ಗೆ ಪಾತ್ರರಾಗಿದ್ದಾರೆ. ನಾಲ್ಕು ದಶಕಗಳಿಗೂ ಅಧಿಕ ಕಾಲದಿಂದ ಕನ್ನಡ ಚಿತ್ರರಂಗದಲ್ಲಿರುವ ಲೀಲಾವತಿ ಅವರಿಗೆ ತಡವಾಗಿಯಾದರೂ ಗೌರವ ಡಾಕ್ಟರೇಟ್ ದೊರಕುತ್ತಿರುವುದು ಸಂತೋಷದ ವಿಚಾರ.

ಅರುವತ್ತರ ದಶಕದಲ್ಲಿ ಲೀಲಾವತಿ ಮತ್ತ್ತು ರಾಜ್ ಕುಮಾರ್ ಜೋಡಿ ಜನಪ್ರಿಯವಾಗಿತ್ತು. ಅವರ ಮೂಲ ಹೆಸರು ಲೀಲಾ ಕಿರಣ್ ಎಂದು ಚಿತ್ರರಂಗಕ್ಕೆ ಬಂದ ನಂತರ ಲೀಲಾವತಿ ಎಂದಾಯಿತು. ಆರಂಭದಲ್ಲಿ ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಮಿಂಚಿದ್ದ ಲೀಲಾವತಿ ಅವರು ಭಕ್ತ ಪ್ರಹ್ಲಾದ, ಮಾಂಗಲ್ಯ ಯೋಗ, ರಾಣಿ ಹೊನ್ನಮ್ಮ, ಮೋಹಿನಿ ಭಸ್ಮಾಸುರ, ವೀರ ಕೇಸರಿ, ಗೆಜ್ಜೆ ಪೂಜೆ, ಸಿಪಾಯಿ ರಾಮು, ರಣಧೀರ ಕಂಠೀರವ ಮುಂತಾದ ಚಿತ್ರಗಳಲ್ಲಿ ಅಮೋಘ ಅಭಿನಯ ನೀಡಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada