»   » ನಂ ಒನ್ ಪಟ್ಟದಲ್ಲಿ ರಾಧಿಕಾ ಪಂಡಿತ್; ರಮ್ಯಾಔಟ್

ನಂ ಒನ್ ಪಟ್ಟದಲ್ಲಿ ರಾಧಿಕಾ ಪಂಡಿತ್; ರಮ್ಯಾಔಟ್

Posted By:
Subscribe to Filmibeat Kannada

ಕನ್ನಡದ ಲಕ್ಕಿ ಸ್ಟಾರ್ ರಮ್ಯಾ ನಂ. ಒನ್ ಪಟ್ಟದಿಂದ ಪದಚ್ಯುತಗೊಂಡಿದ್ದಾರಾ? ಹೌದು ಎನ್ನುತ್ತಿವೆ ಸುದ್ದಿ ಮೂಲಗಳು. ನಂ. ಒನ್ ಪಟ್ಟಕ್ಕೆ ಲಗ್ಗೆ ಇಟ್ಟಿರುವವರು ಬೇರೆ ಯಾರೂ ಅಲ್ಲ, ಇನ್ನೊಬ್ಬರು ಅಪ್ಪಟ ಕನ್ನಡತಿ ರಾಧಿಕಾ ಪಂಡಿತ್. ಕಳೆದ ಆರೇಳು ವರ್ಷಗಳಿಂದ ರಮ್ಯಾ ಅಲುಗಾಡದೇ ಆ ಸ್ಥಾನದಲ್ಲಿ ವಿರಾಜಮಾನವಾಗಿದ್ದರು. ಇದೀಗ ಆ ಸೀಟ್ ರಾಧಿಕಾ ಪಾಲಾಗಿದೆ.

ಈ ನಡುವೆ ರಮ್ಯಾ ಬಹಳಷ್ಟು ಚೂಸಿ ಆಗಿದ್ದಾರೆ, ಕಿರಿಕ್ ಗಳೂ ಹೆಚ್ಚುತ್ತಿವೆ. ಅವರ ದುಬಾರಿ ಸಂಭಾವನೆ ಭರಿಸಲಾಗದೇ ಅವರ ಮನೆಗೆ ಬಂದ ಸಾಕಷ್ಟು ನಿರ್ಮಾಪಕರು ಹಿಂತಿರುಗಿ ಹೋಗಿದ್ದಾರೆ. ಅಷ್ಟೇ ಅಲ್ಲ, ರಮ್ಯಾ ಬೇಡಿಕೆ ಪಟ್ಟಿ ನೋಡಿ ಪರಭಾಷೆಯವರೂ ಕೂಡ ಗಡಗಡ ನಡುಗುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ರಮ್ಯಾ ಚಿತ್ರಗಳು ಕಡಿಮೆಯಾಗಿವೆ.

ಇದೇ ವೇಳೆ ಚಿತ್ರದಿಂದ ಚಿತ್ರಕ್ಕೆ ತಮ್ಮ ಸಂಭಾವನೆ ಹಾಗೂ ಪ್ರತಿಭೆ ಎರಡನ್ನೂ ಹೆಚ್ಚಿಸಿಕೊಳ್ಳುತ್ತಿರುವ ರಾಧಿಕಾ ಪಂಡಿತ್, ಶ್ರೇಷ್ಠ ನಟಿ ಹ್ಯಾಟ್ರಿಕ್ ಪ್ರಶಸ್ತಿ ವಿಜೇತೆ ಬೇರೆ. ಯೋಗೇಶ್ ಜೊತೆ ನಟಿಸಿರುವ ರಾಧಿಕಾರ 'ಅಲೆಮಾರಿ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಎನಿಸಿದೆ. ಬ್ರೇಕಿಂಗ್ ನ್ಯೂಸ್, ಅದ್ದೂರಿ ಬಿಡುಗಡೆಗೆ ಸಿದ್ಧವಾಗಿವೆ. ಜೊತೆಗೆ ಯೋಗರಾಜ್ ಭಟ್ಟರ 'ಡ್ರಾಮಾ'ದಲ್ಲಿ ಯಶ್ ಜೊತೆ ನಟಿಸುತ್ತಿದ್ದಾರೆ ಈ ಮೊಗ್ಗಿನ ಮನಸ್ಸಿನ ರಾಧಿಕಾ ಪಂಡಿತ್.

ನಟನೆಯಲ್ಲಿಯೂ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಿರುವ ರಾಧಿಕಾರ ಅಭಿಮಾನಿವರ್ಗವೂ ಸಹ ದಿನೇದಿನೇ ಹೆಚ್ಚಾಗುತ್ತಿದೆಯಂತೆ. ರಮ್ಯಾ ಯುಗ ಮುಗಿಯಿತು, ಇನ್ನು ರಾಧಿಕಾ ಯುಗ ಎನ್ನುತ್ತಿದೆ ಗಾಂಧಿನಗರ. ಆದರೆ ನಂ. ಒನ್ ಪಟ್ಟದ ಅಳತೆಗೋಲು ಯಾವುದು? ಸಂಭಾವನೆಯೇ? ಅಭಿಮಾನಿಗಳೇ? ಅಥವಾ ಕೈಯಲ್ಲಿರುವ ಚಿತ್ರಗಳೇ? ಯಾವುದಕ್ಕೂ ಸ್ಪಷ್ಟ ಉತ್ತರವಿಲ್ಲ. ಅವರವರ ಭಾವಕ್ಕೆ ಅವರವರ ಭಕುತಿಗೆ ನಂ ಒನ್ ಪಟ್ಟ ಹರಾಜಾಗುತ್ತಿದೆಯೇ? ಉತ್ತರ ಹೇಳುವವರು ಯಾರು?! (ಒನ್ ಇಂಡಿಯಾ ಕನ್ನಡ)

English summary
News that Lucky Star Ramya replaced by actress Radhika Pandit in 'Number One Star' Race. Radhika Pandith, who won hat-trick film-fare award, now got the top heroine place. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada