For Quick Alerts
  ALLOW NOTIFICATIONS  
  For Daily Alerts

  ನೆಚ್ಚಿನ ಚಿತ್ರಮಂದಿರಗಳಲ್ಲಿ ಮತ್ತೆ ಮುಂಗಾರು

  By Rajendra
  |

  ಭಾರತದ 9 ಪ್ರಧಾನಿಗಳ ಕಣ್ಣಿಗೆ ಕಾಣಿಸದೇ ಹೋದ ಕಥೆಯನ್ನು 'ಮತ್ತೆ ಮುಂಗಾರು' ಮೂಲಕ ಈ ಬಾರಿ ಇ ಕೃಷ್ಣಪ್ಪ ತೆರೆಗೆ ತರುತ್ತಿದ್ದಾರೆ. ಏನಿದು ಕಥೆ ಎಂದು ಹುಡುಕ ಹೊರಟರೆ, ಪಾಕಿಸ್ತಾನದಲ್ಲಿ 21 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ ಕನ್ನಡಿಗ ನಾರಾಯಣ ಮಂಡಗದ್ದೆ ಚಿತ್ರಣ ಕಣ್ಣಮುಂದೆ ನಿಲ್ಲುತ್ತದೆ.

  ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ ನಾರಾಯಣ ಮಂಡಗದ್ದೆ. ಅಟಲ್ ಬಿಹಾರಿ ವಾಜಪೇಯಿ ಅವರ ಮಧ್ಯಸ್ಥಿಕೆಯ ಕಾರಣ ಈತ ಪಾಕಿಸ್ತಾನದ ಕಪಿಮುಷ್ಠಿಯಿಂದ ಬಿಡುಗಡೆಯಾಗಿ 2003ರಲ್ಲಿ ಮನೆ ಸೇರಿಕೊಂಡ. ಆದರೆ ಆತ ಮನೆ ಸೇರುವ ವೇಳೆಗೆ ಗುರುತು ಸಿಗಲಾರದಷ್ಟು ಬದಲಾಗಿದ್ದ. ನಾನೇ ನಾರಾಯಣ ಎಂದು ಮನೆಯವರನ್ನು ಒಪ್ಪಿಸುವಷ್ಟರಲ್ಲಿ ಆತ ಹೈರಾಣಾಗಿರುತ್ತಾನೆ.

  ಪಾಕ್ ಸೆರೆವಾಸದಿಂದ ಮುಕ್ತನಾಗಿ ಮನೆಗೆ ಬಂದಾಗ ಆತನಿಗೆ ಆಗ 48 ವರ್ಷ ವಯಸ್ಸಾಗಿರುತ್ತದೆ. ಈಗ ಆತನಿಗೆ 55 ವರ್ಷ. ಶಿವಮೊಗ್ಗದ ದುರ್ಗ ಅಮೃತ್ ಲಾಡ್ಜ್ ನಲ್ಲಿ ಸದ್ಯಕ್ಕೆ ಆತ ಕೆಲಸ ಮಾಡುತ್ತಿದ್ದಾನೆ. ಆತನನ್ನು ಈಗ ಜನ ಪಾಕಿಸ್ತಾನ ನಾರಾಯಣ ಎಂದೇ ಗುರುತಿಸುತ್ತಾರೆ. ಈಗ ಈ ನಾರಾಯಣ ಪಾತ್ರಕ್ಕೆ ಶ್ರೀನಗರ ಕಿಟ್ಟಿ ಜೀವ ತುಂಬಿದ್ದಾರೆ. ಪಾಕ್ ನಲ್ಲಿ ಆತ ಪಟ್ಟ ಕಷ್ಟಗಳು, ಅನುಭವಿಸಿದ ನೋವುಗಳು ಈಗ ತೆರೆಗೆ ತಂದಿದ್ದಾರೆ ಕೃಷ್ಣಪ್ಪ.

  ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಕಂಠಸಿರಿಯಿಂದ "ಹೇಳದೆ ಹೋದೆಯಾ ದೂರ..." ಎಂಬ ಹಾಡು ಈಗಾಗಲೆ ಜನಪ್ರಿಯವಾಗಿದೆ. ಪಾಲ್‌ರಾಜ್ ಸಂಗೀತ ಸಂಯೋಜಿಸಿರುವ ಚಿತ್ರದ ಹಾಡುಗಳ ಸೀಡಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ ಎನ್ನುತ್ತಾರೆ ನಿರ್ಮಾಪಕರು. ಕರ್ನಾಟಕದ ರಮಣೀಯ ಸ್ಥಳಗಳು ಹಾಗೂ ಮುಂಬೈ ಮಹಾನಗರಿಯಲ್ಲಿ 'ಮತ್ತೆ ಮುಂಗಾರು' ಚಿತ್ರದ ಚಿತ್ರೀಕರಣ ನಡೆದಿದೆ.

  ಮುಂಗಾರು ಮಳೆ ಮತ್ತು ಮೊಗ್ಗಿನ ಮನಸು ಚಿತ್ರಗಳ ನಂತರ ಇ ಕೃಷ್ಣಪ್ಪ ಅವರ ಹೆಮ್ಮೆಯ 3ನೇ ಕಾಣಿಕೆ 'ಮತ್ತೆ ಮುಂಗಾರು'. ಈ "ಕಡಲ ತೀರದ ಕವಿತೆ"(ಚಿತ್ರದ ಅಡಿಬರಹ)ಗೆ ದ್ವಾರ್ಕಿ ರಾಘವ್ ನಿರ್ದೇಶನವಿದೆ. ಇ.ಕೆ ಎಂಟರ್ ಟೈನರ್ಸ್ ಲಾಂಛನದಲ್ಲಿ ಇ.ಕೃಷ್ಣಪ್ಪ ಅವರು ನಿರ್ಮಿಸಿರುವ ಚಿತ್ರವಿದು.

  ಸುಂದರನಾಥಸುವರ್ಣರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಡಿಫರೆಂಟ್‌ಡ್ಯಾನಿ ಸಾಹಸ, ಮೋಹನ್ ಬಿ ಕೆರೆ ಅವರ ಕಲಾನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀನಗರ ಕಿಟ್ಟಿ, ರಚನಾ ಮಲ್ಹೋತ್ರ, ರೂಪದೇವಿ, ಮುನಿ, ರವಿಶಂಕರ್(ಪಯಣ), ಅಚ್ಯುತ, ಸುಷ್ಮಾ, ಏಣಗಿ ನಟರಾಜ್, ನೀನಾಸಂ ಅಶ್ವಥ್ ಅಭಿನಯಿಸಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X