»   » ಶ್ರೀಮುರಳಿಯ ಶಿವಮಣಿಗೆ ವಿಭಿನ್ನ ಪ್ರಚಾರ ತಂತ್ರ

ಶ್ರೀಮುರಳಿಯ ಶಿವಮಣಿಗೆ ವಿಭಿನ್ನ ಪ್ರಚಾರ ತಂತ್ರ

Posted By:
Subscribe to Filmibeat Kannada
Shivamani movie ads on autorickshaws
ಸಿನಿಮಾ ಪ್ರಚಾರ ತಂತ್ರಕ್ಕಾಗಿ ನಿರ್ಮಾಪಕ,ನಿರ್ದೇಶಕರು ನಾನಾ ಹಾದಿಗಳನ್ನು ತುಳಿದಿದ್ದಾರೆ.ಇದಕ್ಕಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಬಿಎಂಟಿಸಿ ಬಸ್ಸುಗಳ ಮೂಲಕ ಜಾಹೀರಾತು ನೀಡಲಾಯಿತು. ಹಾಗಾಗಿ ಮಸ್ತ್ ಮಜಾ ಮಾಡಿ, ವಂಶಿಯಂತಹ ಚಿತ್ರಗಳು ಬಿಎಂಟಿಸಿ ಬಸ್ಸುಗಳನ್ನು ಹತ್ತಿದವು. ಕೆಲವು ಯುವ ನಿರ್ದೇಶಕರು ಯೂಟ್ಯೂಬ್ ನಂತಹ ಸೋಷಿಯಲ್ ನೆಟ್ ವರ್ಕ್ ತಾಣಗಳ ಮೊರೆ ಹೋಗಿದ್ದು ಉಂಟು. ಆದರೆ ಈ ತಂತ್ರಗಳು ಒಂದು ವರ್ಗದ ಪ್ರೇಕ್ಷಕರನ್ನು ಮಾತ್ರ ತಲುಪುತ್ತಿದ್ದವು.

ಸಿನಿಮಾ ಪ್ರಚಾರ ತಂತ್ರದ ಮುಂದುವರಿದ ಭಾಗವಾಗಿ ಶಿವಮಣಿ ಚಿತ್ರ ಆಟೋ ಹತ್ತಿದೆ.ಮಧ್ಯಮ ವರ್ಗದ ಪ್ರೇಕ್ಷಕರನ್ನು ಸುಲಭವಾಗಿ ತಲುಪಬಹುದು ಎಂಬುದು ನಿರ್ಮಾಪಕರ ಬುದ್ಧಿವಂತಿಕೆ. ಹಾಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ 25 ಆಟೋಗಳನ್ನು ಶಿವಮಣಿ ಪ್ರಚಾರಕ್ಕೆ ಬಳಸಿಕೊಳ್ಳಲಾಗಿದೆ. ಈ ಆಟೋಗಳು ಬೆಂಗಳೂರು ನಗರದಲ್ಲಿ ಸುತ್ತು ಹೊಡೆಯುತ್ತ್ತಾ ಶಿವಮಣಿಗೆ ಬೊಂಬಾಟ್ ಪ್ರಚಾರ ನೀಡಲಿವೆ.

ಚಿತ್ರದಲ್ಲಿ ಶ್ರೀಮುರಳಿ ಮತ್ತು ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರಧಾರಿಗಳು. ಶಿವಮಣಿ, ಯುವಕರನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದ ಚಿತ್ರವಾಗಿದ್ದು. ಇದಕ್ಕಾಗಿ ನಿರ್ದೇಶಕ ಅಮರನಾಥ್ ಸಾಕಷ್ಟು ಹೋಂ ವರ್ಕ್ ಸಹ ಮಾಡಿದ್ದಾರಂತೆ. ಇನ್ನು ನಿರ್ಮಾಪಕರಂತೂ ಜಿಪುಣತನ ಮಾಡದೆ ಕಲಾವಿದರ ಬೇಕು ಬೇಡಗಳನ್ನು ಅಚ್ಚುಕಟ್ಟಾಗಿ ಪೂರೈಸಿದ್ದಾರೆ. ಅದ್ಭುತ ಸಾಹಸ ದೃಶ್ಯಗಳು ಹಾಗೂ ಉತ್ತಮ ಚಿತ್ರಕಥೆ, ಬಿಗಿಯಾದ ನಿರೂಪಣೆ ಇರುವ ಕಾರಣ ಈ ಚಿತ್ರ ಶ್ರೀಮುರಳಿಯ ಹಿಂದಿನ ಚಿತ್ರಗಳಂತೆ ಬಾಕ್ಸಾಫೀಸಿನಲ್ಲಿ ಪಲ್ಟಿ ಹೊಡೆಯುವುದಿಲ್ಲ ಎಂಬುದು ನಿರ್ದೇಶಕರ ವಿಶ್ವಾಸ.

(ದಟ್ಸ್ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada