twitter
    For Quick Alerts
    ALLOW NOTIFICATIONS  
    For Daily Alerts

    ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಆಗ್ರಹ

    By Staff
    |

    KCN Chandrashekar
    ಮಲ್ಟಿಫೆಕ್ಸ್ ಗಳು ದಿನವೊಂದಕ್ಕೆ ಕನಿಷ್ಠ ನಾಲ್ಕು ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಎಂಬ ಪ್ರಮುಖ ಬೇಡಿಕೆಯನ್ನು ಮುಂದಿಟ್ಟುಕೊಂಡು ಕನ್ನಡ ಚಿತ್ರೋದ್ಯಮ ರಾಜ್ಯದಾದ್ಯಂತ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಇದೇ ರೀತಿಯ ಇನ್ನೂ ಹತ್ತು ಹಲವಾರು ಪ್ರಮುಖ ನಿರ್ಧಾರಗಳನ್ನು ಕನ್ನಡ ಚಿತ್ರೋದ್ಯಮ ಅಮೃತ ಮಹೋತ್ಸವದಲ್ಲಿ ಕೈಗೊಂಡಿದೆ.

    ಕನ್ನಡ ಚಿತ್ರಗಳ ಗುಣಮಟ್ಟ ಹಾಗೂ ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆಯೂ ಖೇದ ವ್ಯಕ್ತವಾಗಿದೆ. ಚಿತ್ರೋದ್ಯಮ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ನಿವಾರಣೋಪಾಯಗಳನ್ನು ಚರ್ಚಿಸಲಾಯಿತು. ನಿರ್ಮಾಪಕರು ಉತ್ತಮ ಕಥೆ, ಚಿತ್ರಕಥೆಗಳನ್ನು ಪ್ರೋತ್ಸಾಹಿಸುತ್ತಿಲ್ಲ ಎಂದು ದೂರಿದರು. ರೀಮೇಕ್ ಚಿತ್ರಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.

    ಕರ್ನಾಟಕ ಚಲನಚಿತ್ರ ಕಾರ್ಮಿಕರು, ಕಲಾವಿದರು ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷ ಅಶೋಕ್ ಮಾತನಾಡುತ್ತಾ, ರೀಮೇಕ್ ಚಿತ್ರಗಳಿಗೆ ಅಂತ್ಯ ಹಾಡಬೇಕಿದೆ , ನಮ್ಮಲ್ಲಿ ಬಹಳಷ್ಟು ಉತ್ತಮ ಕಾದಂಬರಿಗಳಿವೆ, ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಹೆಚ್ಚಬೇಕು ಎಂದರು. ಚಲನಚಿತ್ರದ ಹಕ್ಕುಗಳನ್ನು ದೂರದರ್ಶನಕ್ಕೆ ಮಾರಾಟದ ಬಗ್ಗೆಯೂ ವಿರೋಧ ವ್ಯಕ್ತವಾಯಿತು. ಆದರೆ ಇದನ್ನ್ನು ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಒಪ್ಪಲಿಲ್ಲ.

    ಕಳಪೆ ದರ್ಜೆಯ ಚಿತ್ರಮಂದಿರಗಳು, ದುಬಾರಿ ಟಿಕೆಟ್ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಚಿತ್ರಮಂದಿರಗಳು ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಹಾಗೆಯೇ ಟಿಕೆಟ್ ಬೆಲೆಗಳನ್ನು ಕಡಿಮೆ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ಅಭಿಪ್ರಾಯ ಹೊಮ್ಮಿತು. ಫಾರ್ಮುಲಾ ಚಿತ್ರಗಳನ್ನು (ಒಂದು ಚಿತ್ರ ಹಿಟ್ ಆದರೆ ಅದರ ಹಿಂದೆಯೇ ಅದೇ ಸೂತ್ರ ಅನುಸರಿಸಿ ಪುಂಖಾನು ಪುಂಖ ಚಿತ್ರಗಳನ್ನು ನಿರ್ಮಿಸುವುದು) ಕೈಬಿಡಬೇಕು. ಇದೊಂದು ರೀತಿ ಕನ್ನಡ ಚಿತ್ರರಂಗೆಕ್ಕೆ ಶಾಪವಾಗಿ ಪರಿಣಮಿಸಿದೆ. ಚಿತ್ರಗಳಲ್ಲಿ ಹಿಂಸಾಚಾರ, ಅಶ್ಲೀಲತೆ ತಪ್ಪಬೇಕು.

    ನಿರ್ದೇಶಕ ಫಣಿರಾಮಚಂದ್ರ ತಮಗೆ ಅವಕಾಶಗಳನ್ನು ಯಾವ ನಿರ್ಮಾಪಕರೂ ನೀಡುತ್ತಿಲ್ಲ ಎಂದು ದೂರಿದರು. ನಾನು ಇದುವರೆಗೂ 15 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. 5 ಚಿತ್ರಗಳು ಶತದಿನೋತ್ಸವ ಆಚರಿಸಿಕೊಂಡಿವೆ. ಆದರೂನನಗೆ ಯಾರು ಕೆಲಸ ಕೊಡುತ್ತಿಲ್ಲ ಎಂದರು. ಸಾ ರಾ ಗೋವಿಂದು ಮಧ್ಯ ಪ್ರವೇಶಿಸಿ ನೀವು ಕೊಟ್ಟ ಲೆಕ್ಕಗಳೆಲ್ಲಾ ತಪ್ಪು ಎಂದರು.ಇವರಿಬ್ಬರ ವಾದ ವಿವಾದಗಳು ಕಾವೇರುತ್ತಿರುವಂತೆಯೇ ಕೆಸಿಎನ್ ಚಂದ್ರಶೇಖರ್ ಮೈಕ್ ಕಿತ್ತುಕೊಂಡು ಸಮಾಧಾನ ಪಡಿಸಿದರು.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು
    ಕನ್ನಡ ಚಿತ್ರಗಳ ಸೋಲು, ಗೆಲುವು ಮತ್ತು ಸವಾಲು
    ಬಿರುಸಿನ ಚಟುವಟಿಕೆಗಳ ತಾಣವಾದ ಗಾಂಧಿನಗರ
    ಸಾರ್ಥಕ ಅಮೃತ ಮಹೋತ್ಸವ: ಗ್ಯಾಲರಿ

    Thursday, March 5, 2009, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X