ಆಂಧ್ರದಲ್ಲಿ ಲವ್ ಕಾಲೇಜ್ ಓಪನ್ ಮಾಡಿದ ನಮಿತಾ
ಸೆಕ್ಸಿ ತಾರೆ ನಮಿತಾ ತೆಲುಗಿನಲ್ಲಿ 'ಲವ್ ಕಾಲೇಜ್' ಓಪನ್ ಮಾಡಿದ್ದಾರೆ. ಆದರೆ ಈ ಕಾಲೇಜಿಗೆ ಯಾವುದೇ ವಿಶ್ವವಿದ್ಯಾಲಯದ ಮಾನ್ಯತೆ ಇಲ್ಲ. ಇಂತಿಪ್ಪ ಕಾಲೇಜಿನ ಟೀಚರ್ ಆಗಿ ನಮಿತಾ ಆಯ್ಕೆಯಾಗಿದ್ದಾರೆ. ಆದರೆ ನಿಜವಾಗಿಯೂ ಅಲ್ಲ ಬೆಳ್ಳಿತೆರೆಯ ಮೇಲೆ.
ಈ ಚಿತ್ರ ಈಗಾಗಲೆ ಕನ್ನಡದಲ್ಲಿ ತೆರೆಕಂಡು ಮೂರೇ ದಿನಕ್ಕೆ ಮಂಗಮಾಯವಾಗಿತ್ತು. ಈಗ ಇದೇ ಚಿತ್ರ ಆಂಧ್ರದಲ್ಲಿ ಪ್ರತ್ಯಕ್ಷವಾಗುತ್ತಿದೆ. 'ನಮಿತಾ ಐ ಲವ್ ಯು' ಚಿತ್ರ ತೆಲುಗಿಗೆ ಡಬ್ ಆಗುತ್ತಿದ್ದು ತೆಲುಗಿನಲ್ಲಿ 'ಲವ್ ಕಾಲೇಜು' ಎಂದು ನಾಮಕರಣ ಮಾಡಲಾಗಿದೆ.
ಕನ್ನಡದಲ್ಲಿ ಚಿತ್ರ ತೋಪಾಗಿದ್ದರೂ ಆಂಧ್ರದಲ್ಲಿ ಜಯಭೇರಿ ಬಾರಿಸುತ್ತದೆ ಎಂಬ ನಂಬಿಕೆಯಲ್ಲಿ ಚಿತ್ರದ ನಿರ್ದೇಶಕ ಜಯಸಿಂಹ ರೆಡ್ಡಿ ಇದ್ದಾರೆ. ತೆಲುಗು ಚಿತ್ರಕ್ಕೆ ಹೊಸದಾಗಿ ಕೆಲವು ದೃಶ್ಯಗಳನ್ನೂ ಸೇರಿಸಿ ಬಿಡುಗಡೆ ಮಾಡಲಾಗುತ್ತಿದೆ ಎನ್ನುತ್ತಾರೆ ಜಯಸಿಂಹ. (ಒನ್‌ಇಂಡಿಯಾ ಕನ್ನಡ)
More from Filmibeat
English summary
South Spicy actress Namitha's upcoming Telugu movie Love College is a dubbed version of Kannada flop movie Namitha I Love You. But the director Jayasimha Reddy believes that the Telugu version will be definitely pulls the crowed.


Click it and Unblock the Notifications











