»   » ನೀನೆ ನೀನೆ ಚಿತ್ರ ಏಕಕಾಲಕ್ಕೆ ವಿದೇಶದಲ್ಲಿ ತೆರೆಗೆ

ನೀನೆ ನೀನೆ ಚಿತ್ರ ಏಕಕಾಲಕ್ಕೆ ವಿದೇಶದಲ್ಲಿ ತೆರೆಗೆ

Subscribe to Filmibeat Kannada

ಧ್ಯಾನ್ ಹಾಗೂ ಐಶ್ವರ್ಯ ನಾಗ್ ಅಭಿನಯದ ನೀನೆ ನೀನೆ ಚಿತ್ರ ನಾಳೆ ಬಿಡುಗಡೆಯಾಗಲಿದ್ದು, ನೂತನ ದಾಖಲೆ ನಿರ್ಮಿಸಲಿದೆ. ಏಕಕಾಲಕ್ಕೆ ರಾಜ್ಯದ ಚಿತ್ರಮಂದಿರಗಳಷ್ಟೇ ಅಲ್ಲದೆ , ಅಮೆರಿಕ, ಆಸ್ಟ್ರೇಲಿಯಾ, ಮುಂಬಯಿ ಹಾಗೂ ನವದೆಹಲಿಯ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.ಈ ಕಾರ್ಯವನ್ನು ಸಾಧಿಸಿದ ಖುಷಿಯಲ್ಲಿದ್ದಾರೆ ಬಳ್ಳಾರಿಯ ಹತ್ತಿ ಉದ್ಯಮಿ ನಿರ್ಮಾಪಕ ಬಸವ ರೆಡ್ಡಿ. ಇದೇ ಮೊದಲ ಬಾರಿಗೆ ಚಿತ್ರ ವಿತರಣೆ ಕಾರ್ಯವನ್ನು ಕೈಗೆತ್ತಿಕೊಂಡಿರುವ ಚಿತ್ರಲೋಕ.ಕಾಂನ ಮಾಲೀಕ ಕೆ.ಎಂ.ವೀರೇಶ್ ಅವರಿಗೂ ಇದು ಹೊಸ ಅನುಭವ.

ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ. ಕನ್ನಡಿಗರು ನೆಲೆಸಿರುವ ಇತರ ಪ್ರದೇಶಗಳಲ್ಲೂ ಚಿತ್ರವನ್ನು ಕೊಂಡೊಯ್ಯಲು ತಯಾರಿ ನಡೆಸಿದ್ದೇವೆ. ಮಧ್ಯ ಪ್ರಾಚ್ಯ ದೇಶಗಳಲ್ಲಿ ಕೂಡ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇದು ನನ್ನ ಕಾರ್ಯಕ್ಷೇತ್ರವಲ್ಲ. ಆದರೂ ನಿಷ್ಠೆ ಹಾಗೂ ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿಕೊಂಡರೆ ಯಶ ಖಂಡಿತಾ ಎಂಬುದು ನನ್ನ ಅನುಭವದಿಂದ ಕಂಡುಕೊಂಡ ಸತ್ಯ. ನಿರ್ದೇಶಕ ಶಿವಧ್ವಜ್ ಅವರ ಮೇಲೆ ನನಗೆ ಭರವಸೆ ಇದೆ. ಕನ್ನಡ ಜನತೆಯನ್ನು ಈ ಚಿತ್ರ ರಂಜಿಸುವುದರಲ್ಲಿ ಸಂಶಯವಿಲ್ಲ. ಈ ಚಿತ್ರದಲ್ಲಿ ಯಾವುದೇ ಆಕ್ಷೇಪಾರ್ಹ ದೃಶ್ಯಗಳು ಅಥವಾ ಮಾತುಗಳು ಕಂಡು ಬಂದಲ್ಲಿ ಕ್ಷಮೆಯಾಚಿಸುತ್ತೇನೆ ಎನ್ನುತಾರೆ ಭರವಸೆಯ ನಿರ್ಮಾಪಕ ಬಸವರೆಡ್ಡಿ.

ಈ ಚಿತ್ರದ ವಿತರಣೆ ಮಾಡುವ ಮೂಲಕ ಚಿತ್ರರಂಗದಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಕೆ.ಎಂ.ವೀರೇಶ್ ಅವರು, ಈ ಚಿತ್ರದ ನಂತರ ಗಂಗಾ ಕಾವೇರಿ ಹಾಗೂ ಚಿಕ್ಕಮಗಳೂರ ಚಿಕ್ಕಮಲ್ಲಿಗೆ ಚಿತ್ರಗಳನ್ನೂ ವಿದೇಶದಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತ್ರೀರ್ಣ ಹೆಚ್ಚಿಸಲು ನಿರ್ಮಾಪಕರ ಸಹಕಾರ, ಪ್ರೇಕ್ಷಕರ ಬೆಂಬಲ ಅಗತ್ಯ ಎನ್ನುತ್ತಾರೆ ಚಿತ್ರಲೋಕದವೀರೇಶ್.

ನನ್ನ ಪ್ರೀತಿಯ ಹುಡುಗಿ, ಮೊನಾಲೀಸಾ ಹಾಗೂ ಅಮೃತಧಾರೆಗಳಂಥ ಹಿಟ್ ಚಿತ್ರಗಳ ಚಾಕಲೇಟ್ ಹೀರೋ ಧ್ಯಾನ್, ಈ ಚಿತ್ರದಲ್ಲಿ ಪ್ರಬುದ್ಧ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಹೊಸ ಪರಿಚಯ ಐಶ್ವರ್ಯಾ ನಾಗ್ ಗೆ ಇದು ಮೊದಲ ಅನುಭವ, ಮುಂದಿನ ವಾರ ಬಿಡುಗಡೆ ಭಾಗ್ಯ ಕಾಣಲಿರುವ ಉದಯ್ ಜಾದೂಗರ್ ಅವರ ದರೋಡೆ ಚಿತ್ರಕ್ಕೂ ಕೂಡ ಈಕೆ ನಾಯಕಿ. ಸ್ವತಂತ್ರವಾದ ಆಲೋಚನೆಯುಳ್ಳ ಯುವ ಸಾಫ್ಟ್ ವೇರ್ ಇಂಜಿನಿಯರ್ ಗಳ ಪ್ರೇಮ, ಬಾಂಧವ್ಯ ,ಜೀವನ ನಿರ್ವಹಣೆಯ ಸುತ್ತಾ ಹೆಣೆದ ಕಥೆಯೇ ನೀನೆ ನೀನೆ.

(ದಟ್ಸ್ ಕನ್ನಡಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada