ಕನ್ನಡಕ್ಕೆ ಮತ್ತೆ ಬಂದ ಬಂಗಾರದ ಜಿಂಕೆ ನಿಕೇಶಾ ಪಟೇಲ್
ಕನ್ನಡದ ಬೆಳ್ಳಿಪರದೆಗೆ ನಿಕೇಶಾ ಪಟೇಲ್ ಎಂಬ ಬಂಗಾರದ ಜಿಂಕೆ ಮತ್ತೆ ಬಂದಿದ್ದಾಳೆ. ಮಾಡೆಲಿಂಗ್ ಜಗತ್ತಿನಲ್ಲಿ ಒಂದು ಕೈ ನೋಡಿರುವ ಈಕೆ ತೆಲುಗಿನಲ್ಲೂ ಅದೃಷ್ಟ ಪರೀಕ್ಷಿಸಿಕೊಂಡಿದ್ದಾಳೆ. ಈಗಾಗಲೆ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ 'ನರಸಿಂಹ' ಚಿತ್ರದಲ್ಲಿ ಅಭಿನಯಿಸುತ್ತಿರುವ ನಿಕೇಶಾ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿಹಾಕಿದ್ದಾರೆ.
ಚಿರಂಜೀವಿ ಸರ್ಜಾ ಮುಖ್ಯಭೂಮಿಕೆಯಲ್ಲಿರುವ 'ವರದನಾಯಕ' ಚಿತ್ರಕ್ಕೆ ನಿಕೇಶಾ ಬಂದಿದ್ದಾರೆ. ಇದು ಆಕೆ ಅಭಿನಯದ ಎರಡನೆ ಕನ್ನಡ ಚಿತ್ರ. 'ವರದನಾಯಕ' ಚಿತ್ರ ಬಹುತಾರಾಗಣದ ಭಾರಿ ಬಜೆಟ್ ಚಿತ್ರ. ಸುದೀಪ್, ಅರ್ಜುನ್ ಸರ್ಜಾ ಹಾಗೂ ಸಾಯಿ ಕುಮಾರ್ ಚಿತ್ರದ ತಾರಾಗಣದಲ್ಲಿದ್ದಾರೆ.
ಶಂಕರೇಗೌಡ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಅಯ್ಯಪ್ಪ ಶರ್ಮ. ಸುದೀಪ್ ಪ್ರಿಯಮಣಿಯಾಗಿ ಪ್ರಿಯಾಮಣಿ ಚಿತ್ರದಲ್ಲಿ ಕಾಣಿಸಲಿದ್ದಾರೆ. ತೆಲುಗಿನ 'ಲಕ್ಷ್ಯಂ' ಚಿತ್ರದ ರೀಮೇಕ್ ಇದಾಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ತೆರೆಗೆ ತರಲಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











