ಎರಡನೇ ಸರ್ಜರಿಗೆ ಸಜ್ಜಾದ ನಟ ಸಲ್ಮಾನ್ ಖಾನ್

By Rajendra

ನರದೌರ್ಬಲ್ಯದಿಂದ ಬಳಲುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅಮೆರಿಕಾದಲ್ಲಿ ಈಗಾಗಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವೈದ್ಯರು ಮತ್ತೊಂದು ಸರ್ಜರಿ ಮಾಡಬೇಕಾಗಿದೆ ಎಂದು ತಿಳಿಸಿದ್ದು ಶೀಘ್ರದಲ್ಲೆ ಸಲ್ಲು ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.

ಆರಂಭದಲ್ಲಿ ಸಲ್ಲು ಶಸ್ತ್ರಚಿಕಿತ್ಸೆ ಸುದ್ದಿಗಳು ಲೀಕ್ ಆದಾಗ, ಇದೆಲ್ಲಾ ಗಾಳಿಸುದ್ದಿ ಎಂದಿದ್ದರು. ತಮಗೆ ಶಸ್ತ್ರಚಿಕಿತ್ಸೆ ಆಗಿರುವ ಬಗ್ಗೆ ಸಲ್ಲು ಅವರೇ ಸ್ಪಷ್ಟಪಡಿಸಿದ್ದಾರೆ. ಈಗಾಗಲೆ ಒಂದು ಶಸ್ತ್ರಚಿಕಿತ್ಸೆ ನಡೆದಿದೆ. ತುರ್ತು ಇನ್ನೊಂದು ಸರ್ಜರಿ ಆಗಬೇಕಾಗಿದೆ ಎಂದು ವೈದ್ಯರು ಸೂಚಿಸಿದ್ದಾಗಿ ಅವರು ತಿಳಿಸಿದ್ದಾರೆ.

ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಲಂಡನ್‌ನಲ್ಲಿ ಒಂದಷ್ಟು ದಿನ ರೆಸ್ಟ್ ತೆಗೆದುಕೊಂಡು ಪುನಃ ಚಿತ್ರೀಕರಣಕ್ಕೆ ಆಗಮಿಸಲಿದ್ದಾರೆ. ಅವರ ಮುಂದಿನ ಚಿತ್ರ 'ಏಕ್ ತಾ ಟೈಗರ್' ಚಿತ್ರ ದುಬೈನಲ್ಲಿ ಸೆಟ್ಟೇರಲಿದೆ. ತಮ್ಮ ಆರೋಗ್ಯ ಕೈಕೊಟ್ಟ ಕಾರಣ ಈಬಾರಿಯ ಈದ್ ಮತ್ತು ಗಣೇಶ ಚತುರ್ಥಿ ಸಂಭ್ರಮ ಸಲ್ಲುಗೆ ಸಿಗದೆ ಇರುವುದು ಅವರನ್ನು ಕೊಂಚ ನಿರಾಶೆಗೊಳಿಸಿದೆ. (ಏಜೆನ್ಸೀಸ್)

More from Filmibeat

English summary
Bollywood actor Salman Khan who recently underwent a major surgery in US was reportedly has been asked to undergo another in coming time. Salman says that he is heading to London to rest for a week and will then fly to Dubai to commence the shooting of Yash Raj’s ‘Ek Tha Tiger’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X