»   » ಮಹರ್ಷಿ ಪ್ರಶಾಂತನ ಜತೆಯಲ್ಲಿ ಪೂಜಾಗಾಂಧಿ

ಮಹರ್ಷಿ ಪ್ರಶಾಂತನ ಜತೆಯಲ್ಲಿ ಪೂಜಾಗಾಂಧಿ

Subscribe to Filmibeat Kannada

'ಮುಂಗಾರು ಮಳೆ 'ಖ್ಯಾತಿಯ ಪೂಜಾ ಗಾಂಧಿ ಈಗ 'ಒರಟ ಐ ಲವ್ ಯು 'ಚಿತ್ರದ ನಾಯಕ ಪ್ರಶಾಂತ್ ಜತೆಗೂಡಿ ಮಹರ್ಷಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಕಾಲದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿರುವ ಕೃಷ್ಣಬ್ರಹ್ಮ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ವಿಶೇಷ.

ಮಾನಸ ಚಿತ್ರ ಲಾಂಛನದಲ್ಲಿ ಡಿ.ಕೆ.ರಾಮಕೃಷ್ಣ ಹಾಗೂ ಕೆ.ಜೆ.ಚಿದಾನಂದ್ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಿ.ರಾಜಶೇಖರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. 'ಒರಟ ಐ ಲವ್ ಯು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದಾರೆ. ಒರಟ ಇಮೇಜ್ ಬದಲಾಯಿಸಲು ಗಡ್ಡ ಮೀಸೆ ತೆಗೆದು ಮಿರಿಮಿರಿ ಮಿಂಚುತ್ತಿರುವ ಕನ್ನಡದ ಯುವನಟ ಪ್ರಶಾಂತ್ ಗೆ ಈ ಚಿತ್ರದ ಮೇಲೆ ಅಪಾರ ಭರವಸೆಯಿದೆ. ಮುನಿ, ವಿಶ್ವ . ಸ್ವಸ್ತಿಕ್‌ಶಂಕರ್ ಮುಂತಾದವರು ಇವರೊಂದಿಗಿದ್ದಾರೆ.

ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಆರಂಭಗೊಂಡ 'ಮಹರ್ಷಿ' ಚಿತ್ರಕ್ಕೆ ಭರದ ಚಿತ್ರೀಕರಣ ನಡೆಯುತ್ತಿದೆ. ನಾಯಕ ಹಾಗೂ ನಾಯಕಿಯ ಅಭಿನಯದಲ್ಲಿ ಕೆಲವು ಪ್ರೇಮ ಸನ್ನಿವೇಶಗಳನ್ನು ಹಾಗೂ ಹೆಸರುಘಟ್ಟದಲ್ಲಿರುವ ಆಚಾರ್ಯ ಕಾಲೇಜಿನಲ್ಲಿ ಪುಂಡ ಹುಡುಗರು ಚೇಡಿಸುವ ಸನ್ನಿವೇಶವನ್ನು ನಿರ್ದೇಶಕ ಕೃಷ್ಣಬ್ರಹ್ಮ ಚಿತ್ರೀಕರಿಸಿಕೊಂಡರು.

ಕೃಷ್ಣಬ್ರಹ್ಮ ಅವರು ರಾಕೇಶ್ ಅವರೊಡಗೂಡಿ ಚಿತ್ರಕ್ಕೆ ಮಾತು ಬರೆದು ಚಿತ್ರಕಥೆ ರಚಿಸುವ ಹೊಣೆ ಹೊತ್ತಿದ್ದಾರೆ. ಉಳಿದಂತೆ ರಮೇಶ್‌ ಅವರಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ, ಮೋಹನ್ ಕಲೆ, ಮೋಹನ್‌ಮಾಳಗಿ ಸಹ ನಿರ್ದೇಶನ, ಅನಿಲ್ ಅವರ ನಿರ್ಮಾಣ ನಿರ್ವಹಣೆ 'ಮಹರ್ಷಿ'ಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada