»   » ವಿಶಿಷ್ಟ ಕಥೆಯುಳ್ಳ ಅನು ಚಿತ್ರಕ್ಕೆ ಸೆನ್ಸಾರ್ ಪೂರ್ಣ

ವಿಶಿಷ್ಟ ಕಥೆಯುಳ್ಳ ಅನು ಚಿತ್ರಕ್ಕೆ ಸೆನ್ಸಾರ್ ಪೂರ್ಣ

Subscribe to Filmibeat Kannada
Pooja Gandhi and Rashmi
ತೆಲುಗಿನ ಯಶಸ್ವಿ ಚಿತ್ರ 'ಅನುಸೂಯ' ಕನ್ನಡಕ್ಕೆ ರೀಮೇಕ್ ಆಗಿ 'ಅನು' ಎಂದಾಗಿದೆ.ಈಗ ಆ ಚಿತ್ರ ಸೆನ್ಸಾರ್ ಪೂರ್ತಿಯಾಗಿದೆ. ಡಿಸೆಂಬರ್ ಮೂರನೇ ವಾರದಲ್ಲಿ ಅನು ಚಿತ್ರ ತೆರಕಾಣಲಿದೆ. ಚಿತ್ರದ ಪ್ರಮುಖ ಆಕರ್ಷಣೆ ಎಂದರೆ ಕಥೆ.

ಪೂಜಾಗಾಂಧಿ ಹಾಗೂ ದುನಿಯಾ ರಶ್ಮಿ ಆ ಕಥೆಗೆ ಹೇಗೆ ಜೀವ ತುಂಬಿದ್ದಾರೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಬೇಕು.ಸಾಹಸ ಪ್ರಧಾನವಾದ ಈ ಚಿತ್ರದಲ್ಲಿ ಪೂಜಾಗಾಂಧಿ ಪತ್ರಕರ್ತೆಯಾಗಿ ಕಾಣಿಸಲಿದ್ದಾರೆ.ಇದೊಂದು ಸಂಪೂರ್ಣ ಪತ್ತೆದಾರಿ ಸಿನಿಮಾ. ದುನಿಯಾ ರಶ್ಮಿ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಬಾಲು ನಿರ್ಮಿಸಿರುವ 'ಅನು' ಚಿತ್ರಕ್ಕೆ ಶಿವಗಣಪತಿ ನಿರ್ದೇಶನವಿದೆ. ರವಿಬಾಬು ಕಥೆ ಮತ್ತು ಚಿತ್ರಕಥೆ, ನಿರಂಜನ ಬಾಬು ಛಾಯಾಗ್ರಹಣ. ಸಂಭಾಷಣೆ ಗಜೇಂದ್ರ, ಸಂಕಲನ ಬಿಎಸ್ ಕೆಂಪರಾಜು. ಚಿತ್ರದ ತಾರಾಗಣದಲ್ಲಿ ನಾಗ ಕಿರಣ್, ಬಾಲು,ದತ್ತಣ್ಣ, ಸುಂದರ್ ರಾಜ್, ಬಾಲರಾಜ್ ಮತ್ತು ಸಂಗಮೇಶ್ ಮುಂತಾದವರು ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada