»   » ಹೆಚ್ ಟುಒ ಪ್ರಭುದೇವ ಅವರಿಗೆ ಪುತ್ರ ವಿಯೋಗ

ಹೆಚ್ ಟುಒ ಪ್ರಭುದೇವ ಅವರಿಗೆ ಪುತ್ರ ವಿಯೋಗ

Posted By:
Subscribe to Filmibeat Kannada
Prabhu Deva's elder son passes away
ಪ್ರಭುದೇವ ಅವರಿಗೆ ಹೀಗಾಗಬಾರದಿತ್ತು. ಆದರೆ ದುರಂತ ಸಂಭವಿಸಿಬಿಟ್ಟಿದೆ. ದೀರ್ಘ ಕಾಲದಿಂದ ಬಳಲುತ್ತಿದ್ದ ಅವರ ಹಿರಿಯ ಪುತ್ರ ವಿಶಾಲ್ ಚೆನ್ನೈನ ಆಸ್ಪತ್ರೆಯಲ್ಲಿ ಗುರುವಾರ ನಿಧನರಾಗಿದ್ದಾರೆ. ಪ್ರಭುದೇವ ಅವರಿಗೆ ತುಂಬಲಾಗದಷ್ಟು ನಷ್ಟ ಉಂಟಾಗಿದೆ. ಅವರ ಮನೆಯಲ್ಲೀಗ ಭರಿಸಲಾಗದಷ್ಟು ನೋವು ಮಡುಗಟ್ಟಿದೆ.ಚಿತ್ರೋದ್ಯಮದಲ್ಲಿ ತನ್ನದೇ ಆದ ಶಿಸ್ತುಬದ್ಧ ಜೀವನಕ್ಕೆ ಪ್ರಭುದೇವ ಹೆಸರಾಗಿದ್ದಾರೆ. ಪ್ರಾಮಾಣಿಕತೆ ಮತ್ತು ಕಷ್ಟಪಟ್ಟು ದುಡಿಯುವುದಷ್ಟೇ ಪ್ರಭುದೇವ ನಂಬಿರುವ ತಾರಕ ಮಂತ್ರಗಳು.

ತನ್ನದೇ ಆದ ವಿಶಿಷ್ಟ ಡ್ಯಾನ್ಸ್ ಮೂಲಕ ತೊಂಬತ್ತರ ದಶಕದಲ್ಲಿ ಪ್ರಭುದೇವ ಇಡೀ ಬಾಲಿವುಡ್ ನ ಗಮನ ಸೆಳೆದಿದ್ದರು. 'ಕಾದಲನ್' ಚಿತ್ರದಲ್ಲಿನ ಮೈನವಿರೇಳಿಸುವ ಅವರ ನೃತ್ಯದಿಂದ ಭಾರತದ ಮೈಕೇಲ್ ಜಾಕ್ಸನ್ ಎಂದೇ ಹೆಸರಾಗಿದ್ದರು. ಉಪೇಂದ್ರ ಅವರ ಹೆಚ್ ಟು ಒ ಚಿತ್ರದಲ್ಲಿ ನಟಿಸಿದ್ದನ್ನು ನೆನಸಿಕೊಳ್ಳಬಹುದು.

ಲತಾ ಬಾಳಸಂಗಾತಿಯಾದ ನಂತರ ಪ್ರಭುದೇವ ಅವರಿಗೆ ವಿಶಾಲ್, ರಿಶಾ ರಾಘವೇಂದ್ರ ದೇವ ಮತ್ತು ಅಧಿತ್ ದೇವ ಜನಿಸಿದ್ದರು. ದೀರ್ಘ ಕಾಯಿಲೆಯಿಂದ ಬಳಲುತ್ತಿದ್ದ ವಿಶಾಲ್ ಅವರನ್ನು ಚಿಕಿತ್ಸೆಗಾಗಿ ಕಳೆದ ಆರು ತಿಂಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಮುಂಜಾನೆ ವಿಶಾಲ್ ರ ಪ್ರಾಣಪಕ್ಷಿ ಹಾರಿಹೋಗಿದೆ. ಚೆನ್ನೈನ ಬಸಂತ್ ನಗರದಲ್ಲಿರುವ ಚಿತಾಗಾರದಲ್ಲಿ ಶುಕ್ರವಾರ ವಿಶಾಲ್ ಅಂತ್ಯಕ್ರಿಯೆ ನೆರವೇರಿತು. ಈ ಸಂದರ್ಭದಲ್ಲಿ ತಮಿಳು ಚಿತ್ರರಂಗದ ಪ್ರಕಾಶ್ ರಾಜ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada