ಆರ್ ಅಶೋಕ್ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು

ಮಲ್ಲೇಶ್ವರದ ಮಂತ್ರಿ ಮಾಲ್ ಸೇರಿದಂತೆ ಲಿಡೋ (ಹಲಸೂರು), ಗರುಡಾ ಮಾಲ್, ವಿಷನ್ ಸಿನಿಮಾಸ್, ಶಂಕರನಾಗ್, ಪಿವಿಆರ್ (ಕೋರಮಂಗಲ) ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳ ಪ್ರದರ್ಶನ ನಿರಾತಂಕವಾಗಿ ನಡೆಯುತ್ತಿದೆ ಎಂದು 'ವಿಜಯ ಕರ್ನಾಟಕ' ಉದ್ದದ ಪಟ್ಟಿ ನೀಡಿದೆ.
ಫೆಬ್ರವರಿ 4, 5 ಮತ್ತು 6ರಂದು ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಸೂಚಿಸಲಾಗುವುದು ಎಂದು ಸಚಿವ ಆರ್ ಅಶೋಕ್ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಗುಡುಗಿದ್ದರು. ಆದರೆ ಅವರ ಸೂಚನೆಯನ್ನು ಚಿತ್ರಮಂದಿರದ ಮಾಲೀಕರು ಗಾಳಿಗೆ ತೂರಿದ್ದಾರೆ.
ನಾರಾಯಣ ಗೌಡ ಎಚ್ಚರಿಕೆ: ಕೆಲವು ಚಿತ್ರಮಂದಿರಗಳು ಅನ್ಯಭಾಷಾ ಚಿತ್ರಗಳನ್ನು ಪ್ರದರ್ಶಿಸುತ್ತಿವೆ. ಸಾಹಿತ್ಯ ಸಮ್ಮೇಳನ ಜಾತ್ರೆ ಮುಗಿಯುವವರೆ ಕನ್ನಡ ಚಿತ್ರಗಳನ್ನು ಪ್ರದರ್ಶಿಸದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಚಿತ್ರಮಂದಿರದ ಮಾಲೀಕರಿಗೆ ಕರವೇರಾಜ್ಯಾಧ್ಯಕ್ಷ ನಾರಾಯಣ ಗೌಡ ಎಚ್ಚರಿಸಿದ್ದಾರೆ.
ಸಮ್ಮೇಳನದ ಆರಂಭದಿಂದಲೇ ಕೆಲವು ಚಿತ್ರಮಂದಿರಗಳಲ್ಲಿ ಅನ್ಯಭಾಷೆಯ ಚಿತ್ರಗಳು ತೆರೆಕಂಡಿದ್ದು, ತಮ್ಮ ಗಮನಕ್ಕೆ ಬಂದಿದೆ. ಮತ್ತೆ ಅನ್ಯಭಾಷೆಯ ಚಿತ್ರಗಳನ್ನು ಪ್ರದರ್ಶಿಸಿದ್ದು ನಮ್ಮ ಗಮನಕ್ಕೆ ಬಂದರೆ, ಮುಂದೆ ಆಗಬಹುದಾದ ಅನಾಹುತಕ್ಕೆ ರಕ್ಷಣಾ ವೇದಿಕೆ ಹೊಣೆಯಲ್ಲ ಎಂದಿದ್ದಾರೆ.


Click it and Unblock the Notifications











