»   »  ಶಿವಣ್ಣನ ಮನೆ ಹತ್ತಿರದ ಪಾರ್ಕ್ ನಲ್ಲಿ ನಮಿತಾ!

ಶಿವಣ್ಣನ ಮನೆ ಹತ್ತಿರದ ಪಾರ್ಕ್ ನಲ್ಲಿ ನಮಿತಾ!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನೆ ಬಳಿಯ ಉದ್ಯಾನದಲ್ಲಿ ಮೋಹಕ ನಟಿ ಮೀರಾ ಜಾಸ್ಮಿನ್ ಮತ್ತು ನಮಿತಾ ಇಬ್ಬರೂ ಪ್ರತ್ಯಕ್ಷವಾಗಿದ್ದಾರೆ. ಇದೇನಿದು ಅವರಿಬ್ಬರೂ ಅಲ್ಲಿಗೇಕೆ ಬಂದರು ಎಂಬುದು ತಾನೆ ಅನುಮಾನ! ಹೆಬ್ಬಾಳ ಬಳಿಯ ಶಿವಣ್ಣನ ಮನೆಯ ಹತ್ತಿರದ ಉದ್ಯಾನವನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ 'ಹೂ' ಚಿತ್ರದ ಚಿತ್ರೀಕರಣಕ್ಕಾಗಿ ಭರದಿಂದ ಸಾಗುತ್ತಿದೆ.

ರವಿಚಂದ್ರನ್ ಮತ್ತು ಮೀರಾ ಜಾಸ್ಮಿನ್ ನಡುವಿನ ಸನ್ನಿವೇಶಗಳನ್ನು ಛಾಯಾಗ್ರಾಹಕ ಸೀತಾರಾಮ್ ಸೆರೆಹಿಡಿದರು. ಈಗಾಗಲೇ ಈ ಚಿತ್ರ ಶೇ.25ರಷ್ಟು ಚಿತ್ರೀಕರಣ ಮುಗಿಸಿದೆ. ರವಿಚಂದ್ರನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ.

ತೆಲುಗಿನ ಸೂಪರ್ ಹಿಟ್ ಚಿತ್ರ 'ವಸಂತಂ' ರೀಮೇಕ್ ಇದಾಗಿದ್ದು ವೆಂಕಟೇಶ್ ಅಭಿನಯಿಸಿದ್ದರು. ಚಿತ್ರದ ತಾರಾಗಣದಲ್ಲಿ ರಂಗಾಯಣ ರಘು, ಬುಲೆಟ್ ಪ್ರಕಾಶ್, ಶರಣ್, ಚಿತ್ರಾ ಶೆಣೈ ಇದ್ದಾರೆ. ಈ ಚಿತ್ರವನ್ನು ದಿನೇಶ್ ಗಾಂಧಿ ನಿರ್ಮಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada