»   » ರೆಬೆಲ್ ಸ್ಟಾರ್ ಅಂಬಿ ಮನೆ ಮುಂದೆ 90 ಅಡಿ ಕಟೌಟ್

ರೆಬೆಲ್ ಸ್ಟಾರ್ ಅಂಬಿ ಮನೆ ಮುಂದೆ 90 ಅಡಿ ಕಟೌಟ್

Posted By:
Subscribe to Filmibeat Kannada
Rebel Star Ambarish
ಮಂಡ್ಯದ ಗಂಡು, ಕಲಿಯುವ ಕರ್ಣ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡಿರುವ ರೆಬೆಲ್ ಸ್ಟಾರ್ ಅಂಬರೀಷ್ ಅವರ 60ನೇ ಹುಟ್ಟುಹಬ್ಬಕ್ಕೆ ಭಾರಿ ಸಿದ್ಧತೆಗಳು ನಡೆಯುತ್ತಿವೆ. ಜೆಪಿ ನಗರದ ಮನೆ ಮುಂದೆ ಭಾರಿ ಕಟೌಟ್‌ಗಳು ತಲೆಯೆತ್ತಿದ್ದು 90 ಅಡಿ ಎತ್ತರದ ಕಟೌಟನ್ನು ನಿಲ್ಲಿಸಲಾಗಿದೆ.

ಈಗಷ್ಟೇ ಅವರು ಕೆಪಿಸಿಸಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಅಂಬಿ ಅವರ ಹುಟ್ಟುಹಬ್ಬ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಅರುವತ್ತು ವರ್ಷಕ್ಕೆ ಅಡಿಯಿಡುತ್ತಿರುವ ಅಂಬರೀಷ್ ಚಿತ್ರರಂಗಕ್ಕೆ ಪಾದಾರ್ಪಣೆಗೈದು 40 ವರ್ಷಗಳನ್ನು ಪೂರೈಸಿದ್ದಾರೆ.

ಮೇ 27, 28 ಹಾಗೂ 29ರಂದು ಅಂಬರೀಷ್ ಅವರ ಹುಟ್ಟುಹಬ್ಬನ್ನು ಕನ್ನಡ ಚಿತ್ರರಂಗ ಅದ್ದೂರಿಯಾಗಿ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಚಿತ್ರರಂಗ ಸ್ಥಗಿತಗೊಳ್ಳಲಿದೆ. ಅಂಬಿ ಷಷ್ಠಿಪೂರ್ತಿ ಸಮಾರಂಭಕ್ಕೆ ಇಡೀ ಕನ್ನಡ ಚಿತ್ರರಂಗದ ತಾರೆಗಳು ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಲಿದ್ದಾರೆ. (ಒನ್‍ಇಂಡಿಯಾ ಕನ್ನಡ)

English summary
The Kannada cinema industry is closing for three days for the 'Ambi Sambrama'. The main event is on 29th of May, 2012 at Bangalore Palace. The entire Kannada film industry representatives are expected to take part in 'Ambi Sambrama' - on the occasion of 60 years of Ambarish and 40 years of it spending in Kannada cinema is a jubilant mood in the Kannada cinema industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada