ಸಾರಥಿ ಹೌಸ್ ಫುಲ್: ಅಗ್ನಿಪರೀಕ್ಷೆಯಲ್ಲಿ ದರ್ಶನ್ ಪಾಸು!

Sarathi
ಸಾರಥಿ ಚಿತ್ರ ಚಿತ್ರಮಂದಿರಕ್ಕೆ ಬರುವ ಮೊದಲು ದರ್ಶನ್ ಕಥೆ ಮುಗೀತು ಅಂತಿದ್ದವರೆಲ್ಲಾ ಈಗ ತೆಪ್ಪಗಾಗಿದ್ದಾರೆ. ಕಾರಣ ಬಿಡುಗಡೆಯಾದ ಎಲ್ಲಾ ಕಡೆ ಸಾರಥಿ ಹೌಸ್ ಫುಲ್! ಈ ಮೂಲಕ ದರ್ಶನ್ ಮತ್ತೊಮ್ಮೆ ಫವರ್ ಫುಲ್!

ದರ್ಶನ್ ಸುತ್ತ ವಿವಾದದ ಬೇಲಿ ಇದ್ದಾಗಲೇ ಸಾರಥಿ ತೆರೆಗೆ ಬಂದಾಗ ದರ್ಶನ್ ಅಭಿಮಾನಿಗಳಲ್ಲೂ ಕಾರ್ಮೋಡ ಕವಿದಿತ್ತು. ಆದರೆ ಈಗ ಚೂರು ಚಿಂತೆಗೂ ಜಾಗವಿಲ್ಲದಂತೆ ಸಾರಥಿ ಗೆದ್ದಾಯ್ತು, ದರ್ಶನ್ ಜೈಲಿನಲ್ಲೇ ಆನಂದಬಾಷ್ಪ ಸುರಿಸಿದ್ದೂ ಆಯ್ತು.

ದರ್ಶನ್ ಎಂಬ ವ್ಯಕ್ತಿ-ಕೃತ್ಯಗಳೇ ಬೇರೆ ಬೇರೆ, ಅವರು ಅಭಿನಯಿಸಿದ ಸಿನಿಮಾವೇ ಬೇರೆ. ನಾವು ಅವರನ್ನು ಕೇವಲ ಒಬ್ಬ ನಟನಾಗಿ ನೋಡುತ್ತೇವೆ. ಅವರು ಅಭಿನಯಿಸಿರುವ ಸಿನಿಮಾಕ್ಕೂ, ಅವರ ಖಾಸಗಿ ಬದುಕಿಗೂ ನಾವು ತಾಳೆ ಹಾಕುವುದಿಲ್ಲ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಪ್ರೇಕ್ಷಕರು ಶರಾ ಬರೆದು ಚಿತ್ರಮಂದಿರಕ್ಕೆ ಪ್ರವಾಹೋಪಾದಿಯಲ್ಲಿ ಬರುತ್ತಿದ್ದಾರೆ.

ಹಾಗಾಗಿ ಸಾರಥಿ ನಿರ್ಮಾಪಕರು ಸೇಪ್, ದರ್ಶನ್ ಕೂಡ ಸೇಫ್ ಸೇಫ್! ನಿರ್ಮಾಣ ಹಂತದಲ್ಲಿರುವ ನಿರ್ಮಾಪಕರ ಮುಖದಲ್ಲಿ ಈಗಲೇ ಗೆಲುವಿನ ನಗೆ. ಕೇವಲ ದರ್ಶನ್ ಅಭಿಮಾನಿಗಳ ಊರುಗಳಲ್ಲಲ್ಲದೇ ಇತರೆಡೆ ಕೂಡ ಸಾರಥಿ ಹೌಸ್ ಫುಲ್. ಅಲ್ಲಿಗೆ ಜನರಿಗೆ ಖಾಸಗಿ ವಿಷಯದಲ್ಲಿ ಆಸಕ್ತಿ ಇಲ್ಲ ಎಂದಂತಾಯಿತು. ಇನ್ನು ಮುಂದಾದರೂ ನಾಲ್ಕು ಗೋಡೆಯ ಮಧ್ಯೆ ನಿರ್ಧಾರ ಆಗಬೇಕಾದ ವಿಷಯ ಬೀದಿಗೆ ಬರದಿರಲಿ...

More from Filmibeat

English summary
Challenging Star Darshan Movie "Sarathi" becoming houseful day by day. Fans of Darshan became very happy form this development. In this time, it is necessary to darshan a grand success of movie. It's the time to say " Sarathi Houseful and Darshan Pass".
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X