ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ಸಂಬಂಧದಲ್ಲಿ ಬಿರುಕು
ಈ ರೀತಿಯ ಸುದ್ದಿಯೊಂದು ಈಗ ಬಾಲಿವುಡ್ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ ಸಂಬಂಧದಲ್ಲಿ ಏನೋ ಹೆಚ್ಚುಕಡಿಮೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ಈ ಸುದ್ದಿಯನ್ನು ಶಿಲ್ಪಾ ಶೆಟ್ಟಿ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.
ಸದ್ಯಕ್ಕೆ ನಾನು ಮತ್ತು ನನ್ನ ಗಂಡ ಯುಎಸ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದೇವೆ. ಲಂಡನ್‌ನಲ್ಲಿ ರಾಜ್ ಕುಂದ್ರಾ ಹೇರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್ ಒಂದರಲ್ಲಿ ಚೆಂದುಳ್ಳಿ ಚೆಲುವೆಯೊಬ್ಬಳು ಪರಿಚಯವಾಗುತ್ತಾಳೆ. ಬಳಿಕ ಯುರೋಪ್‌ಗೆ ಇಬ್ಬರು ಹಾರಿದ್ದಾಗಿ ಗುಸುಗುಸು ಸುದ್ದಿ ಇತ್ತು.
"ನನ್ನ ಪತಿಯ ಜೊತೆ ಹಾಯಾಗಿ ಯುಎಸ್‌ಎನಲ್ಲಿದ್ದೇನೆ. ಇಲ್ಲಿ ರಜಾ ದಿನಗಳನ್ನು ಕಳಿಯುತ್ತಿದ್ದು ಆಲ್ ಈಸ್ ವೆಲ್. ನಮ್ಮನ್ನು ಕಂಡರಾಗದವರು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ." ಎಂದಿದ್ದಾರೆ 36ರ ಹರೆಯದ ಶಿಲ್ಪಾ ಶೆಟ್ಟಿ.ಹಾಗೆಯೇ ತಾವು ಗರ್ಭಿಣಿ ಎಂಬ ಸುದ್ದಿಯನ್ನೂ ತಳ್ಳಿಹಾಕಿದ್ದಾರೆ ಶಿಲ್ಪಾ. (ಏಜೆನ್ಸೀಸ್)
More from Filmibeat
English summary
Bollywood actress Shilpa Shetty has refuted reports that her marriage is in trouble, saying that she and her husband Raj Kundra are holidaying in the US. "False news!grrrrrr:( for the record, my husband and I are holidaying in USA and are very happily married. Sorry to burst the newspapers bubble," she added.
ಶಿಲ್ಪಾ ಶೆಟ್ಟಿ ರಾಜ್ ಕುಂದ್ರಾ ಬಾಲಿವುಡ್ ಗಾಸಿಪ್ ಗರ್ಭಿಣಿ ಮದುವೆ shilpa shetty raj kundra bollywood gossip pregnant marriage


Click it and Unblock the Notifications











