»   » ಮಗಳೊಂದಿಗೆ ಮತ್ತೆ ಶಿವರಾಜ್ ಅಭಿನಯ

ಮಗಳೊಂದಿಗೆ ಮತ್ತೆ ಶಿವರಾಜ್ ಅಭಿನಯ

Subscribe to Filmibeat Kannada

ಶಿವರಾಜ್ ಕುಮಾರ್ ತಮ್ಮ ಎರಡನೇ ಪುತ್ರಿ ನಿವೇದಿತಾರೊಂದಿಗೆ ನಟಿಸಲಿದ್ದಾರೆ. ಈ ಚಿತ್ರಕ್ಕೆ ವಿವಾದಾತ್ಮಕ ನಿರ್ದೇಶಕ ಎಂದೇ ಖ್ಯಾತರಾದ ರವಿ ಶ್ರೀವತ್ಸಾ ಸಾರಥ್ಯ ವಹಿಸಲಿದ್ದಾರೆ. ಸೆನ್ಸಾರ್ ಮಂಡಳಿಯೊಂದಿಗೆ ಬಹಳಷ್ಟು ಗುದ್ದಾಟದ ನಂತರವಷ್ಟೇ ರವಿ ಶ್ರೀವತ್ಸಾ ಚಿತ್ರಗಳು ತೆರೆ ಕಾಣುತ್ತಿವೆ. ಅವರಿಗೂ ಸೆನ್ಸಾರ್ ಮಂಡಳಿಗೂ ಒಂದು ರೀತಿ ಹಾವು ಮುಂಗುಸಿ ಸಂಬಂಧ.

13 ವರ್ಷದ ನಿವೇದಿತಾ ತೆರೆಯ ಮೇಲೂ ಶಿವರಾಜ್‌ರ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ನಿವೇದಿತಾ ನಟಿಸುತ್ತಿರುವುದು ಇದೇ ಮೊದಲಲ್ಲ. 1998ರಲ್ಲಿ ಪಿ.ಎಚ್.ವಿಶ್ವನಾಥ್ ನಿರ್ದೇಶನದ 'ಅಂಡಮಾನ್' ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. 1997-98ರ ಸಾಲಿನಲ್ಲಿ ಉತ್ತಮ ಬಾಲ ನಟಿ ಎಂಬ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದರು. ಪ್ರಸ್ತುತ 7ನೇ ತರಗತಿಯಲ್ಲಿ ಓದುತ್ತಿರುವ ನಿವೇದಿತಾ ಮೇ ಮತ್ತು ಜೂನ್ ತಿಂಗಳ ರಜಾ ದಿನಗಳನ್ನು ಅಪ್ಪನ ಜೊತೆ ನಟಿಸಲು ಮೀಸಲಾಗಿಟ್ಟ್ಟಿದ್ದಾರೆ. ಸಂಪೂರ್ಣ ಚಿತ್ರೀಕರಣ ಅಮೆರಿಕದಲ್ಲೇ ನಡೆಯಲಿದೆ. ಗೋವರ್ಧನ ಮೂರ್ತಿ ಈ ಚಿತ್ರದ ನಿರ್ಮಾಪಕರು.

ಇದರ ಚಿತ್ರೀಕರಣ ಮುಗಿದ ನಂತರ ಪಿರಮಿಡ್ ಸಾಯಿಮಿರಾ ಸಂಸ್ಥೆಗಾಗಿ ನಿರ್ದೇಶಕ ರವಿ ಶ್ರೀವತ್ಸ 10 ಕೋಟಿ ರು.ಗಳ ಬೃಹತ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಟುಂಬದ ಶಿವರಾಜ್, ಪುನೀತ್, ರಾಘವೇಂದ್ರ ರಾಜ್‌ಕುಮಾರ್ ನಟಿಸಲಿದ್ದಾರೆ. ಚಿತ್ರಕ್ಕೆ 'ಓಂ' ಎಂಬ ಹೆಸರನ್ನು ನಿರ್ಧರಿಸಲಾಗಿದೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada