ಸ್ಟಂಟ್ ಮಾಸ್ಟರ್ ಮಧುಗೆ ಸಾಯುವಂತ ವಯಸ್ಸಾಗಿರಲಿಲ್ಲ

ಕಾಮಾಲೆಯಿಂದ ಬಳಲುತ್ತಿದ್ದ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಪಿಂಡ ವೈಫಲ್ಯಕ್ಕೂ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮಧು ಅಗಲಿದ್ದಾರೆ.ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಮಧು ಸರಿಸುಮಾರು 350 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಅವರು ಸಾಹಸ ಸಂಯೋಜನೆ ಮಾಡಿದ ಚಿತ್ರಗಳ ಸಂಖ್ಯೆ 80 ಪ್ಲಸ್ ದಾಟುತ್ತದೆ. 'ಹಳ್ಳಿ ಮೇಷ್ಟ್ರು' ಚಿತ್ರದಿಂದ ಆರಂಭವಾದ ಅವರ ಸಿನಿಯಾನ ಸರ್ಕಸ್, ಸುನಾಮಿ, ಸಿತಾರಾ, ಪೊಲೀಸ್ ಸ್ಟೋರಿ 3, ಒನಕೆ ಓಬವ್ವ ಮುಂತಾದ ಚಿತ್ರಗಳತನಕ ಮುಂದುವರೆದಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Stunt Master Tiger Madhu (48) breathed his last on Monday on account of dengue and Jaundice affecting him from last few days. He was admitted to St John Hospital. He worked as fight master for over 350 films.


Click it and Unblock the Notifications











