twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಂಟ್ ಮಾಸ್ಟರ್ ಮಧುಗೆ ಸಾಯುವಂತ ವಯಸ್ಸಾಗಿರಲಿಲ್ಲ

    By Rajendra
    |

    Tiger Madhu
    ಟೈಗರ್ ಮಧು ಎಂದೇ ಖ್ಯಾತರಾದವರು ಸ್ಟಂಟ್ ಮಾಸ್ಟರ್ ಮಧು. ದಿವಂಗತ ಟೈಗರ್ ಪ್ರಭಾಕರ್ ಅವರ ಬಹುತೇಕ ಚಿತ್ರಗಳಿಗೆ ಮಧು ಸಾಹಸ ಸಂಯೋಜನೆ ಮಾಡಿದ ಕಾರಣಕ್ಕೆ ಟೈಗರ್ ಎಂಬ ಬಿರುದು ಅವರ ಹೆಸರಿನ ಜೊತೆ ಅಂಟಿಕೊಂಡಿತ್ತು. ಟೈಗರ್ ಮಧು (48) ಭಾನುವಾರ ರಾತ್ರಿ ಚಿರನಿದ್ರೆಗೆ ಜಾರಿದ್ದಾರೆ. ಆದರೆ ಅವರಿಗೆ ಸಾಯುವಂತಹ ವಯಸ್ಸಾಗಿರಲಿಲ್ಲ. ಬೆಂಗಳೂರು ಧೂಪನ ಹಳ್ಳಿಯಲ್ಲಿ ಮಧು ವಾಸವಾಗಿದ್ದರು.

    ಕಾಮಾಲೆಯಿಂದ ಬಳಲುತ್ತಿದ್ದ ಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂತ್ರಪಿಂಡ ವೈಫಲ್ಯಕ್ಕೂ ಒಳಗಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮಧು ಅಗಲಿದ್ದಾರೆ.ಸಾಹಸ ಕಲಾವಿದನಾಗಿ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಮಧು ಸರಿಸುಮಾರು 350 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

    ಅವರು ಸಾಹಸ ಸಂಯೋಜನೆ ಮಾಡಿದ ಚಿತ್ರಗಳ ಸಂಖ್ಯೆ 80 ಪ್ಲಸ್ ದಾಟುತ್ತದೆ. 'ಹಳ್ಳಿ ಮೇಷ್ಟ್ರು' ಚಿತ್ರದಿಂದ ಆರಂಭವಾದ ಅವರ ಸಿನಿಯಾನ ಸರ್ಕಸ್, ಸುನಾಮಿ, ಸಿತಾರಾ, ಪೊಲೀಸ್ ಸ್ಟೋರಿ 3, ಒನಕೆ ಓಬವ್ವ ಮುಂತಾದ ಚಿತ್ರಗಳತನಕ ಮುಂದುವರೆದಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Stunt Master Tiger Madhu (48) breathed his last on Monday on account of dengue and Jaundice affecting him from last few days. He was admitted to St John Hospital. He worked as fight master for over 350 films.
    Wednesday, July 6, 2011, 11:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X