ಸುದೀಪ್ ಆಕ್ಷನ್ ಕಟ್‍ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ
ಈಗಾಗಲೆ ನಟನೆ ಹಾಗೂ ನಿರ್ದೇಶನದಲ್ಲಿ ಗೆದ್ದಿರುವ ನಲ್ಲ ಸುದೀಪ್ ಈಗ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಆದರೆ ಈ ಬಾರಿ ಅವರು ಆಕ್ಷನ್ ಕಟ್ ಹೇಳುತ್ತಿರುವುದು ಮತ್ತೊಬ್ಬ ನಿರ್ದೇಶಕ ಕಮ್ ನಟ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ. ಈ ಚಿತ್ರ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಸೆಟ್ಟೇರಲಿದೆ.
ಸುದೀಪ್ ಜೊತೆ 'ಕೆಂಪೇಗೌಡ' ಹಾಗೂ ಉಪ್ಪಿ ಜೊತೆ 'ಶ್ರೀಮತಿ' ಚಿತ್ರಗಳನ್ನು ನಿರ್ಮಿಸಿರುವ ಶಂಕರೇಗೌಡ ಚಿತ್ರದ ನಿರ್ಮಾಪಕ. ಸದ್ಯಕ್ಕೆ ಉಪ್ಪಿ ಹಾಗೂ ಸುದೀಪ್ ಇಬ್ಬರೂ ಬ್ಯುಸಿಯಾಗಿದ್ದು ಮಾರ್ಚ್ ಬಳಿಕವಷ್ಟೆ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲಿದ್ದಾರೆ.
ಅತ್ತ ನಿರ್ಮಪಕ ಶಂಕರೇಗೌಡ ಕೂಡ ಶಿವಣ್ಣ ಜೊತೆ ಸಿಎಂ (ಕಾಮನ್ ಮ್ಯಾನ್) ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಉಪ್ಪಿ ಮತ್ತು ಸುದೀಪ್ ಕಾಂಬಿನೇಷನ್ ಚಿತ್ರಕ್ಕೆ ಇನ್ನೂ ಟೈಟಲ್ ಅಂತಿಮವಾಗಿಲ್ಲ. ಚಿತ್ರಕತೆ ಸಂಪೂರ್ಣ ಸಿದ್ಧವಾದ ಬಳಿಕಷ್ಟೆ ಟೈಟಲ್ ನಿರ್ಧಾರವಾಗಲಿದೆ. ಸುದೀಪ್ ಹಾಗೂ ಉಪ್ಪಿ ಇಬ್ಬರೂ ಕೂತು ಪಕ್ಕಾ ಚಿತ್ರಕತೆಯನ್ನು ಹೆಣೆಯುತ್ತಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











