For Quick Alerts
  ALLOW NOTIFICATIONS  
  For Daily Alerts

  ಸದ್ಯದಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಆತ್ಮಚರಿತ್ರೆ

  |
  ಸೂಪರ್ ಸ್ಟಾರ್ ರಜನಿಕಾಂತ್ ಆತ್ಮಚರಿತ್ರೆ ಬರಲಿದೆ. ಈ 'ಬಯಾಗ್ರಪಿ'ಯನ್ನು ವಿಮರ್ಶಕ ನಮನ್ ರಾಮಚಂದ್ರನ್ ಪೆಂಗ್ವಿನ್ ಇಂಡಿಯಾ ಪಬ್ಲಿಷರ್ಸ್ ಮೂಲಕ ಹೊರತರಲಿದ್ದಾರೆ. ಈ ರಜನಿ ಆತ್ಮಚರಿತ್ರೆ ಅವರ 62ನೇ ಹುಟ್ಟುಹಬ್ಬ (12.12.2012)ದಂದು ಬಿಡುಗಡೆ ಆಗಲಿದೆ.

  ಈ ಬಯಾಗ್ರಪಿಯಲ್ಲಿ ಈಗ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದ ಇಂದು ಅವರು ಅಭಿನಯಿಸುತ್ತಿರುವ 'ರಾಣಾ' ಚಿತ್ರದವರೆಗಿನ ಎಲ್ಲ ವಾಸ್ತವ ಚಿತ್ರಣ ಇದೆ. ಈ ಭಾರತದ ಸೂಪರ್ ಸ್ಟಾರ್ ನ ಸಿನಿಮಾ ಜೀವನವಲ್ಲದೇ ರಾಜಕೀಯ ಜೀವನ ಕೂಡ ಇದರಲ್ಲಿ ಅನಾವರಣಗೊಳ್ಳಲಿದೆ.

  ಈ ಎಲ್ಲ ಮಾಹಿತಿಗಳ ಜೊತೆ ರಜನಿಕಾಂತ್ ಅವರ ಕುಟುಂಬ, ಆಪ್ತವರ್ಗ ಹಾಗೂ ಮಿತ್ರರ ಫೋಟೋ ಕೂಡ ಈ ಪುಸ್ತಕದಲ್ಲಿ ಪ್ರಕಟವಾಗಲಿದೆ. ಒಟ್ಟಿನಲ್ಲಿ ರಜನಿಕಾಂತ್ ಬಲ್ಲವರಿಗೆ ಪುಸ್ತಕ ನೋಡಿ ಖುಷಿ ಆಗಬಹುದಾದರೆ ತೆರೆಯಲ್ಲಿ ಮಾತ್ರ ನೋಡಿ ಬಲ್ಲವರಿಗೆ ಅವರ ಬಗ್ಗೆ ತಿಳಿದುಕೊಳ್ಳುವ ಅವಕಾಶ ಲಭಿಸಲಿದೆ. (ಒನ್ ಇಂಡಿಯಾ ಕನ್ನಡ)

  English summary
  Biography of Rajinikanth launch will commemorate his 62nd birthday on the unique date 12.12.2012. This is Critic-producer Naman Ramachandaran's book.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X