ಪ್ರೇಮ್ ಕಹಾನಿ ಚಿತ್ರದ ವಿಡಿಯೋ
ತಾಜ್ ಮಹಲ್ ನಂತಹ ಯಶಸ್ವಿ ಚಿತ್ರ ಕೊಟ್ಟಂತಹ ನಿರ್ದೇಶಕ ಆರ್ ಚಂದ್ರು. ಅವರ ನಿರ್ದೇಶನದ ಮತ್ತೊಂದು ಚಿತ್ರ ಪ್ರೇಮ್ ಕಹಾನಿ. ಹಿಂದಿ ಹೆಸರನ್ನು ಶೀರ್ಷಿಕೆಯಾಗಿಟ್ಟಿರುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಕೊನೆಗೂ ಪ್ರೇಮ್ ಕಹಾನಿ ಎಂಬ ಶೀರ್ಷಿಕೆಯನ್ನು ಉಳಿಸಿಕೊಳ್ಳುವಲ್ಲಿ ಚಂದ್ರು ಗೆದ್ದಿದ್ದಾರೆ. ಈ ಚಿತ್ರ ರಾಜ್ ಶೋಮ್ಯಾನ್ ಬಿಡುಗಡೆ ದಿನಾಂಕದಂದೆ ಬಿಡುಗಡೆಯಾಗಲು ಸಿದ್ಧವಾಗಿದೆ.
ಪ್ರೇಮ್ ಕಹಾನಿ ಚಿತ್ರಕ್ಕೆ ಇಳಯರಾಜ ಸಂಗೀತ, ಕೆ.ಎಂ.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸವನ್ನು ಒಳಗೊಂಡಿದೆ. ನೃತ್ಯ ಸಂಯೋಜನೆ ಮದನ್ ಹರಿಣಿ, ರಘು, ಇಮ್ರಾನ್ ಮತ್ತು ಹರ್ಷ. ಚಿತ್ರ ಸಾಹಿತಿ ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯ ಪ್ರೇಮ್ ಕಹಾನಿ ಚಿತ್ರಕ್ಕಿದೆ. ತಾರಾಗಣದಲ್ಲಿ ಅಜಯ್, ಶೀಲಾ, ರಂಗಾಯಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೋ ನಾಗರಾಜ್ ಹಾಗೂ ಟೆನ್ನಿಸ್‌ಕೃಷ್ಣ ಅಭಿನಯಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
kannada movies ವಿಡಿಯೋ ಕವಿರಾಜ್ ajay ಅಜಯ್ video kaviraj ನಾಗೇಂದ್ರ ಪ್ರಸಾದ್ ಪ್ರೇಮ್ ಕಹಾನಿ ಶೀಲಾ prem kahani tajmahal chandru sheela prem kahani trailer ತಾಜ್ ಮಹಲ್ ಚಂದ್ರು


Click it and Unblock the Notifications