»   » ಧರಂ ತವರಲ್ಲಿ ಸಿನಿಮಾ ಸಮಾರಂಭ !

ಧರಂ ತವರಲ್ಲಿ ಸಿನಿಮಾ ಸಮಾರಂಭ !

Subscribe to Filmibeat Kannada

ಹಾಸನ : 2004ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೂರ್ಯನಗರಿ ಗುಲ್ಬರ್ಗದಲ್ಲಿ ನಡೆಸಲು ತೀರ್ಮಾನಿಸಿದೆ.

ಸಾಮಾನ್ಯವಾಗಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರ ತವರು ಜಿಲ್ಲೆಯಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು ವಾಡಿಕೆ. ಈ ಸಂಪ್ರದಾಯಕ್ಕನುಗುಣವಾಗಿ ಈ ಬಾರಿ ಹಾಸನದಲ್ಲಿ ಸಮಾರಂಭ ನಡೆಯಬೇಕಿತ್ತು . ಆದರೆ ಮುಖ್ಯಮಂತ್ರಿ ಧರ್ಮಸಿಂಗ್‌ ಅವರ ತವರು ಜಿಲ್ಲೆ ಗುಲ್ಬರ್ಗಾದಲ್ಲಿ ಕಾರ್ಯಕ್ರಮ ನಿಗದಿಯಾಗುವ ಮೂಲಕ ಸೂರ್ಯ ನಗರಿಗೆ ಸಿನಿಮಾ ರಂಗು ದೊರೆತಂತಾಗಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೆಲವೇ ದಿನಗಳಲ್ಲಿ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದು ವಾರ್ತಾ ಸಚಿವ ಬಿ.ಶಿವರಾಂ ತಿಳಿಸಿದ್ದಾರೆ.

ಬಿಡುಗಡೆಯಾಗದೇ ಇರುವ ಚಿತ್ರಗಳಿಗೆ ಪ್ರಶಸ್ತಿ ನೀಡುವುದು ಸರಿಯೇ? ಎನ್ನುವ ಸುದ್ದಿಗಾರರಿಗೆ ಸ್ಪಷ್ಟ ಉತ್ತರ ನೀಡದ ಸಚಿವ ಶಿವರಾಂ- ಈ ಕುರಿತು ಸಂಬಂಧಪಟ್ಟವರೊಡನೆ ಚರ್ಚಿಸಲಾಗುವುದು ಎಂದರು.

(ಇನ್ಫೋ ವಾರ್ತೆ)

ಓದಿ- 20004ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada