»   » ‘ಸಿಂಹದ ಮರಿ ಸೈನ್ಯ’ದ ಪ್ರಸನ್ನ, ವಜ್ರಮುನಿ ಅಂತ್ಯಕ್ರಿಯೆ

‘ಸಿಂಹದ ಮರಿ ಸೈನ್ಯ’ದ ಪ್ರಸನ್ನ, ವಜ್ರಮುನಿ ಅಂತ್ಯಕ್ರಿಯೆ

Posted By:
Subscribe to Filmibeat Kannada

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಪ್ರಸನ್ನ ಕುಮಾರ್‌(47) ಅವರ ಅಂತ್ಯಕ್ರಿಯೆ ಗುರುವಾರ ನಗರದಲ್ಲಿ ನೆರವೇರಿತು.

ಬುಧವಾರ ರಾತ್ರಿ ಹೃದಯಘಾತದಿಂದ ಸಾವನ್ನಪ್ಪಿದ ಪ್ರಸನ್ನ, ತಮ್ಮ ದಢೂತಿ ದೇಹದಿಂದ ಪ್ರೇಕ್ಷಕರನ್ನು ಚಲನಚಿತ್ರಗಳಲ್ಲಿ ರಂಜಿಸಿದ್ದರು.

‘ಸಿಂಹದ ಮರಿ ಸೈನ್ಯ’, ‘ಸಾವಿರ ಸುಳ್ಳು’,‘ನಾಗರಹೊಳೆ’ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದ ಪ್ರಸನ್ನ, ಸ್ಮರಣೀಯ ಅಭಿನಯ ನೀಡಿದ್ದಾರೆ. ಇತ್ತೀಚಿನ ‘ಪ್ರೀತ್ಸೋದ್‌ ತಪ್ಪಾ?’,‘ಅಹಂ ಪ್ರೇಮಾಸ್ಮಿ’ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದರು.

ವಜ್ರಗಿರಿಯಲ್ಲಿ ಪೂರ್ಣ ವಿಶ್ರಾಂತಿ :

ಗುರುವಾರ ಬೆಳಗ್ಗೆ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ನಟ ವಜ್ರಮುನಿ, ಅವರ ಪಾರ್ಥಿವ ಶರೀರವನ್ನ್ನು, ಸಾರ್ವಜನಿಕ ವೀಕ್ಷಣೆಗಾಗಿ ಕನಕಪುರ ರಸ್ತೆಯ ಅಂಜನಾಪುರದಲ್ಲಿನ ವಜ್ರಗಿರಿ ಎಸ್ಟೇಟ್‌ನಲ್ಲಿ ಇಡಲಾಗಿತ್ತು. ನಂತರ ವಜ್ರಗಿರಿಯಲ್ಲಿಯೇ ಅಂತ್ಯಕ್ರಿಯೆ ನೆರವೇರಿತು.

ವಜ್ರಮುನಿ ನಿಧನ ವಾರ್ತೆ ಕೇಳಿದ ಡಾ.ರಾಜ್‌ಕುಮಾರ್‌ ಬಿಕ್ಕಿ ಬಿಕ್ಕಿ ಅತ್ತರು. ನಟ ವಿಷ್ಣುವರ್ಧನ್‌, ಅಂಬರೀಷ್‌, ದರ್ಶನ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಪೂರಕ ಓದಿಗೆ-
ಇನ್ನೆಲ್ಲಿ ನಮ್ಮ ‘ವಜ್ರ’ ಮುನಿ?!


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada