»   » 2007 : ಸ್ಯಾಂಡಲ್‌ವುಡ್‌ನಲ್ಲಿ ಏನಿದು ಪ್ರವಾಹವೋ...?!

2007 : ಸ್ಯಾಂಡಲ್‌ವುಡ್‌ನಲ್ಲಿ ಏನಿದು ಪ್ರವಾಹವೋ...?!

Subscribe to Filmibeat Kannada


ಇದು ಕನ್ನಡ ಚಿತ್ರರಂಗದ ಸೌಭಾಗ್ಯವೋ, ದೌಭಾಗ್ಯವೋ ಗೊತ್ತಿಲ್ಲ. ಹೊಸ ವರ್ಷದ ಮೊದಲಾರ್ಧದಲ್ಲಿ ಮಹಾಪ್ರವಾಹ! ಅಂದ್ರೆ; ಬಿಡುಗಡೆಗಾಗಿ ಸಿದ್ಧಗೊಂಡಿರುವ ಸಾಕಷ್ಟು ಚಿತ್ರಗಳು ಕಾದು ಕುಳಿತಿವೆ.

ತೆರೆಗೆ ಬರಲು ಸಜ್ಜಾದ ಚಿತ್ರಗಳ ಪಟ್ಟಿ ದೊಡ್ಡದು. ಮತ್ತೊಂದು ವಿಶೇಷವೆಂದರೆ ಜ.15ರ ನಂತರ 20ಕ್ಕೂ ಹೆಚ್ಚು ಸಿನಿಮಾಗಳು ಸೆಟ್ಟೇರಲಿವೆಯಂತೆ. ಸಿನಿಮಾಗಳ ಸ್ಪರ್ಧೆಯಿಂದ ಪ್ರೇಕ್ಷಕರಿಗಂತೂ ಆಯ್ಕೆಯ ಸುಗ್ಗಿ... ನಿರ್ಮಾಪಕರಿಗೆ?

ನಟ ದೇವರಾಜ್‌ ಪುತ್ರ ಪ್ರಜ್ವಲ್‌ ಅಭಿನಯದ ‘ಸಿಕ್ಸರ್‌’, ದೇವರ ಚಿತ್ರ(?)ದಂತೆಯೇ ಕಾಣಿಸುವ ‘ಹೊಸವರ್ಷ’ 2007ನೇ ವರ್ಷದ ಮೊದಲ ವಾರ ಬಿಡುಗಡೆಯಾಗಿವೆ.

ಪುನೀತ್‌, ರಮ್ಯಾ, ಮೀರಾ ಜಾಸ್ಮಿನ್‌, ಶ್ರೇಯಾ ಅಭಿನಯದ ‘ಅರಸು’, ರವಿಚಂದ್ರನ್‌ ಅಭಿನಯದ ‘ಯುಗಾದಿ’, ರಕ್ಷಿತಾ ಅಭಿನಯದ ಕೊನೆ ಚಿತ್ರ ಎನ್ನಲಾಗುವ ‘ಈ ರಾಜೀವ್‌ ಗಾಂಧಿ... ಅಲ್ಲಾ’ ಎಂಬ ದೊಡ್ಡ ಬಜೆಟ್‌ನ ಚಿತ್ರಗಳು, ಚಿತ್ರಮಂದಿರ ಹುಡುಕುತ್ತಿವೆ.

ಮತ್ತೊಂದು ಕಡೆ ಸ್ವಘೋಷಿತ ಸಕಲ ಕಲಾವಲ್ಲಭ ಎಸ್‌.ನಾರಾಯಣ್‌ ನಿರ್ದೇಶನ, ನಿರ್ಮಾಣದ ‘ತಾಯಿಯ ಮಡಿಲು’, ಮುರಳಿ ಮತ್ತು ಶ್ರೀದೇವಿ ಅಭಿನಯದ ‘ಪ್ರೀತಿಗಾಗಿ’, ಶಿವರಾಜ್‌ ಅಭಿನಯದ ‘ಸಂತ’ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಸುದೀಪ್‌ರ ಎರಡನೇ ನಿರ್ದೇಶನದ ಚಿತ್ರ ‘ನಂ.73ಶಾಂತಿ ನಿವಾಸ’ ಸಹಾ ಮುಕ್ತಾಯವಾಗಿದೆಯಂತೆ.

ಇಷ್ಟು ಸಾಲದು ಎಂಬಂತೆ. ಉಪೇಂದ್ರ ಅಭಿನಯದ ‘ಪರೋಡಿ’, ‘ಮಸ್ತಿ’, ವಿಷ್ಣುವರ್ಧನ್‌, ಪ್ರೇಮಾ ಅಭಿನಯದ ‘ಏಕದಂತ’, ದರ್ಶನ್‌ರ ‘ಭೂಪತಿ’, ಉಪೇಂದ್ರ ಮತ್ತು ದರ್ಶನ್‌ ಜೋಡಿಯ ‘ಹರಿಶ್ಚಂದ್ರ’, ನೆನಪಿರಲಿ ಪ್ರೇಮ್‌ರ ‘ಪಲ್ಲಕ್ಕಿ’ ಚಿತ್ರಗಳು ತೆರೆಗೆ ಬರಲು ಎರಡನೇ ಹಂತದಲ್ಲಿ ಕಾದು ಕುಳಿತಿವೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada