For Quick Alerts
  ALLOW NOTIFICATIONS  
  For Daily Alerts

  ಹೊಸಬರ ‘ಗಿರಿ’ ಮೂಡಿಸುವುದೇ ಗರಿ!

  By Staff
  |
  • ಶಾಲಿನಿ, ನಟೇಶ್‌

  ಖಳನಾಯಕನ ಪಾತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕಿಟ್ಟಿ , ಅರ್ಥಾತ್‌ ಶ್ರೀನಗರದ ಕಿಟ್ಟಿ (ಕೃಷ್ಣಮೂರ್ತಿ) ನಾಯಕ ನಟರಾಗಿ ಬಡ್ತಿ ಪಡೆದಿದ್ದಾರೆ. ಅವರ ಹೊಸ ಚಿತ್ರದ ಹೆಸರು‘ಗಿರಿ’. ಚಂದ್ರಚಕೋರಿಯಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದ ಕಿಟ್ಟಿ ನಾಯಕನಟರಾಗಿ ಸ್ಯಾಂಡಲ್‌ವುಡ್‌ನಲ್ಲಿ ನಿಂತಿದ್ದಾರೆ.

  ಮಲೆನಾಡಿನ ಚಿತ್ರಗಳು ಧಾರಾವಾಹಿಯಲ್ಲಿ ಬಾಲನಟನಾಗಿ ನಟಿಸಿದ್ದ ಕಿಟ್ಟಿ ಮುಂದೆ ಚಂದ್ರಿಕಾ, ಪ್ರೀತಿಗಾಗಿ, ಮನೆ ಮನೆ ಕತೆ, ಭೂಮಿ, ಆನಂದ ಸಾಗರದಲ್ಲಿ ಕಿರುತೆರೆ ವೀಕ್ಷಕರ ಗಮನಸೆಳೆದಿದ್ದರು. ಇತ್ತ ಬೆಳ್ಳಿತೆರೆಯಲ್ಲಿ ಖಳನಟರಾಗಿ ಗೌಡ್ರು, ಲವ್‌ಸ್ಟೋರಿ, ದೋಸ್ತು, ಅಯ್ಯು, ಅಭಿ ಚಿತ್ರಗಳಲ್ಲಿ ನಟಿಸಿದ್ದರು. ನಾಗಮಂಡಲದಿಂದ ಬೆಂಗಳೂರಿಗೆ ಬಂದು ಸರ್ವೀಸ್‌ ಸ್ಪೇಷನ್‌ ತೆರೆದಿದ್ದ ಕಿಟ್ಟಿಯ ಬಣ್ಣದ ಗೀಳು ಅವರನ್ನೀಗ ಇಲ್ಲಿಗೆ ತಂದು ನಿಲ್ಲಿಸಿದೆ.

  ‘ಬಾ ಬಾರೋ ರಸಿಕ’ ಚಿತ್ರವನ್ನು ನಿರ್ಮಿಸಿ ಯಶಸ್ಸು ಕಂಡಿದ್ದ ನಿರ್ಮಾಪಕರರಾದ ಜಿ.ಪ್ರಸಾದ್‌ ರೆಡ್ಡಿ ಮತ್ತು ಸಾಯೀಂದ್ರ ರೆಡ್ಡಿ ಎರಡನೇ ಚಿತ್ರ ‘ಗಿರಿ’ಗೆ ಚಾಲನೆ ನೀಡಿದ್ದಾರೆ. ಇಂಡಿಯಾ ಇನ್ಫೋ.ಕಾಂನ ಕಾರ್ಯಾಲಯದ ಮುಂದೆ ಸೋಮವಾರ (ಜ.31) ಬೆಳಗ್ಗೆಯಿಂದ ಸಂಜೆವರೆಗೆ ಚಿತ್ರದ ಚಿತ್ರೀಕರಣ ನಡೆಯಿತು. ಕಾಶಿ ಕರಿ ಕೋಟು ಧರಿಸಿ, ತಲೆ ಮೇಲೆ ಟೋಪಿ ಹಾಕಿಕೊಂಡಿದ್ದರು. ರಮೇಶ್‌ ಪಂಡಿತ್‌ ಪೋಲೀಸ್‌ ಅಧಿಕಾರಿ ವೇಷದಲ್ಲಿ ಮಿಂಚುತ್ತಿದ್ದರು. ಭರತ್‌ ಭಾಗವತರ್‌, ಶರತ್‌ಲೋಹಿತಾಶ್ವ ಮತ್ತಿತರ ನಟರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

  ಕಥೆ, ಚಿತ್ರಕಥೆಯನ್ನು ಬರೆದು ‘ಗಿರಿ’ಚಿತ್ರವನ್ನು ನಿರ್ದೇಶಿಸುತ್ತಿರುವ ತೆಲುಗಿನ ರವಿಚರಣ್‌ರನ್ನು ‘ದಟ್ಸ್‌ಕನ್ನಡ’ ಮಾತನಾಡಿಸಿತು. ಎಲ್ಲಾ ನಿರ್ದೇಶಕರಂತೆಯೇ ಚಿತ್ರ ತುಂಬಾನೇ ಡಿಫರೆಂಟ್‌ ಅಂದ ರವಿಚರಣ್‌, ಸ್ನೇಹದ ಮಹತ್ವವನ್ನು ಕತೆ ಸಾರಲಿದೆ ಎಂದರು. ಚಿತ್ರದಲ್ಲಿ ಪ್ರೀತಿ ಮತ್ತು ಸಂಜನ ಎನ್ನುವ ಇಬ್ಬರು ನಾಯಕಿಯರಿದ್ದರೂ, ‘ಗಿರಿ’ ತ್ರಿಕೋನ ಪ್ರೇಮದ ಕಥೆಯಲ್ಲವಂತೆ.

  ‘ಗಿರಿ’ ರಿಮೇಕ್‌ ಅಲ್ಲ ಸ್ವಮೇಕ್‌ ಎನ್ನುವ ಹೆಮ್ಮೆ ರವಿಚರಣ್‌ ಅವರದು. ಅಂದ ಹಾಗೇ ನಿರ್ದೇಶಕರು, ನಿರ್ಮಾಪಕರು ತೆಲುಗಿನವರು. ವಿಶೇಷವೆಂದರೆ, ವೀರಕನ್ನಡಿಗ ಚಿತ್ರಕ್ಕೆ ಸಂಗೀತ ನೀಡಿದ್ದ ತೆಲುಗಿನ ಚಕ್ರಿ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  ‘ಗರಿ’ಗಾಗಿ ‘ಗಿರಿ’ : ಚಿತ್ರ ತಂಡದಲ್ಲಿ ರಾಶಿರಾಶಿ ಕನಸುಗಳಿವೆ. ಚಿತ್ರದ ನಿರ್ಮಾಪಕರಿಗೆ ‘ಗಿರಿ’ ಎರಡನೇ ಕೂಸು. ತೆಲುಗು ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿದ್ದ ರವಿಚರಣ್‌ಗೆ ಇದು ಚೊಚ್ಚಲ ಕೂಸು. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಕಿಟ್ಟಿಗೆ ನಾಯಕ ನಟನಾಗಿ ಇದು ಮೊದಲ ಚಿತ್ರ. ಮುಂಬಯಿಯಿಂದ ಕನ್ನಡಕ್ಕೆ ಬಂದಿರುವ ಪ್ರೀತಿಗೆ ಸಹ ಇದು ನಾಯಕಿಯಾಗಿ ಮೊದಲ ಬಡ್ತಿ. ಛಿದ್ರ ಚಿತ್ರದಲ್ಲಿ ನಟಿಸಿದ್ದ ಮತ್ತೊಬ್ಬನಾಯಕಿ ಸಂಜನಾ ಸಹ ‘ಗಿರಿ’ ಮೇಲೆ ವಿಶ್ವಾಸವಿಟ್ಟಿದ್ದಾರೆ.
  ತೆಲುಗಿನಲ್ಲೂ ಡಿಮ್ಯಾಂಡ್‌ ಕಡಿಮೆಯಾಗಿರುವ ಈ ಸಂದರ್ಭದಲ್ಲಿ ಕನ್ನಡದಲ್ಲಿ ನೆಲೆಸಿಗಬಹುದೇ ಎನ್ನುವ ಬಯಕೆ ಸಂಗೀತ ನಿರ್ದೇಶ ಚಕ್ರಿ ಮನದಲ್ಲಿರಬಹುದು. ಒಟ್ಟಾರೇ ‘ಗಿರಿ’ ತಂಡ ಬ್ರೇಕ್‌ಗಾಗಿ ಕಾಯುತ್ತಿದೆ.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X