»   » ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕ ನಿಗೂಢ ಸಾವು

ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕ ನಿಗೂಢ ಸಾವು

Subscribe to Filmibeat Kannada


ಬೆಂಗಳೂರು : ನಗರದ ಚಲನಚಿತ್ರ ಸ್ಟುಡಿಯೋಗಳಲ್ಲಿ ಒಂದಾದ ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕ ಕುಪ್ಪುಸ್ವಾಮಿ ನಾಯ್ಡು, ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ.

ಭಾನುವಾರ(ಮಾ.4) ಬೆಳಗ್ಗೆ ಸಾವನ್ನಪ್ಪಿದ ಕುಪ್ಪು ಸ್ವಾಮಿ(83) ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ಅವರ ಸಹೋದರರ ಪುತ್ರ ಅಜಯ್‌, ಹೈಗ್ರೌಂಡ್ಸ್‌ ಪೊಲೀಸರಿಗೆ ದೂರಿತ್ತಿದ್ದಾರೆ. ಶವಪರೀಕ್ಷೆಯಿಂದ ಅನುಮಾನ ಪರಿಹಾರವಾಗದ ಕಾರಣ, ಕುಪ್ಪುಸ್ವಾಮಿ ಸೇವಿಸಿರುವ ಆಹಾರದ ಪರೀಕ್ಷೆ ನಡೆಸಲು, ಆಹಾರದ ಸ್ಯಾಂಪಲನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ.

80ರ ದಶಕದಲ್ಲಿ ಬೆಂಗಳೂರಿನಲ್ಲಿ ಸ್ಟುಡಿಯೋ ಸ್ಥಾಪಿಸಿ, ತೆಲುಗು-ತಮಿಳು ನಿರ್ಮಾಪಕರನ್ನು ಆಕರ್ಷಿಸಿದ ಹೆಗ್ಗಳಿಕೆ ಕುಪ್ಪುಸ್ವಾಮಿ ಅವರದು.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada