»   » ರಮ್ಯ ಕುಬೇರನ ವಂಶಸ್ಥಳಾದರೂ ಕಿರಿಕ್ಕು,

ರಮ್ಯ ಕುಬೇರನ ವಂಶಸ್ಥಳಾದರೂ ಕಿರಿಕ್ಕು,

Posted By: Staff
Subscribe to Filmibeat Kannada

ಕೆ ಕನ್ನಡಕ್ಕಿಂತ ಸಲೀಸಾಗಿ ಇಂಗ್ಲಿಷಿನಲ್ಲಿ ಮಾತಾಡುತ್ತಾಳೆ. ಆ್ಯಕ್ಟಿಂಗು ಅಷ್ಟಕ್ಕಷ್ಟೆ. ನೋಡೋಕೆ ತ್ರಿಪುರ ಸುಂದರಿಯೇನೂ ಅಲ್ಲ. ಆದರೆ ಆಕ್ಸ್‌ಫರ್ಡ್‌ ವಿದ್ಯಾರ್ಥಿನಿಯರ ಶಿಸ್ತನ್ನೂ ನಿವಾಳಿಸಿ ಬಿಸಾಕುವಂಥಾ ಟೈಮ್‌ ಸೆನ್ಸು. ಸಿನಿಮಾ ಮಂದಿಯಿಂದ ಒಮ್ಮೆಯೂ ಬೆನ್ನ ಹಿಂದೆ ಕೂಡ ನಾನ್‌ಸೆನ್ಸ್‌ ಅನ್ನಿಸಿಕೊಂಡಾಕೆಯಲ್ಲ. ಹೆಸರು ರಮ್ಯ.

ಕನ್ನಡ ಸಿನಿಮಾಗೆ ಪಕ್ಕದ ಮನೆಯಿಂದ ಕರೆಸಿ ತರುವ ನಾಯಕಿಯರಿಗೆ ಚಾಮರ ಬೀಸಿದರೂ, ಶೂಟಿಂಗ್‌ ಶೆಡ್ಯೂಲಲ್ಲಿ ಏರುಪೇರು ಮಾಮೂಲು. ಅಂಥಾದ್ದರಲ್ಲಿ ನಮ್ಮೂರಿನ, ನಮ್ಮ ಸಿಎಂ ಕೃಷ್ಣ ಅವರ ಸಂಬಂಧಿ ರಮ್ಯ ಶೂಟಿಂಗಿಗೆ ಟೈಮಿಗೆ ಸರಿಯಾಗಿ ಬಂದು ಹೋಗುವಾಕೆ. ತಾನಾಯಿತು, ತನ್ನ ಕೆಲಸ ಆಯಿತು. ಗುಲಗಂಜಿಯಷ್ಟೂ ಹೆಚ್ಚು ಮಾತಾಡೋಲ್ಲ. ಪ್ರಚಾರಕ್ಕಾಗಿ ಗೋಷ್ಠಿ ಕರೆಯುವ ಜಾಯಮಾನದವಳೂ ಅಲ್ಲ. ಓಡಾಡೋದು ಬೆಂಝ್‌ ಕಾರಲ್ಲೇ. ಹುಟ್ಟಿದ್ದು ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡೇ.

ಇಂಥಾ ಪೊಲಿಟಿಕಲ್‌ ಹಾಗೂ ಇಕನಾಮಿಕಲ್‌ ಬ್ಯಾಗ್ರೌಂಡ್‌ ಇಟ್ಟುಕೊಂಡಿರುವ ರಮ್ಯ 'ಅಪ್ಪು" ಚಿತ್ರಕ್ಕೇ ನಾಯಕಿಯಾಗಬೇಕಿತ್ತು. ಆದರೆ ಆಗ ರಾಜ್‌ಕುಮಾರ್‌ ಅವರನ್ನು ಬಿಡಿಸಿ ತರುವ ವಿಷಯದಲ್ಲಿ ಪಾರ್ವತಮ್ಮ ಹಾಗೂ ಕೃಷ್ಣ ನಡುವೆ ಹರಿದ ಬೆವರು ಹೈರಾಣು ಮಾಡಿತ್ತು. ರಮ್ಯ ಅರಾಂಗೇಟ್ರಂಗೆ ತಕ್ಕಂಥಾ ಪರಿಸ್ಥಿತಿ ಆಗ ಇರಲಿಲ್ಲ. ಹಾಗಾಗಿ ಅದೃಷ್ಟ ಮಮತಾ ರಾವ್‌ ಪುತ್ರಿ ರಕ್ಷಿತಾ ಪಾಲಾಯಿತು.

ಈಗಲೂ ಅದೇ ರಕ್ಷಿತಾ 'ಅಭಿ" ಮುಹೂರ್ತಕ್ಕೆ ಬಂದು ಕೂತಿದ್ದಳು. ಆಕೆಯ ಪಕ್ಕದಲ್ಲಿ ರಮ್ಯ. ಪಾರ್ವತಮ್ಮನವರು ಕೊನೆ ಗಳಿಗೆಯಲ್ಲಿ ನಾಯಕಿ ಯಾರು ಅಂತ ಹೆಸರು ಪ್ರಕಟಿಸುವವರೆಗೂ ಸಸ್ಪೆನ್ಸ್‌ ಮನೆ ಮಾಡಿತ್ತು. ಕೊನೆಗೂ ರಮ್ಯಗೆ ಅವಕಾಶ ಸಿಕ್ಕಿತು. ಪುನೀತ್‌ಗೆ ಎರಡನೇ ಬಾರಿ ಜೋಡಿಯಾಗುವ ರಕ್ಷಿತಾ ಕನಸು ಕನಸಾಗೇ ಉಳಿಯಿತು.

ರಮ್ಯಾಳನ್ನು ಆರಿಸಿದ್ದಕ್ಕೆ ದಿನೇಶ್‌ ಬಾಬು ಸೇರಿದಂತೆ ಯಾರೊಬ್ಬರೂ ಪೇಚಾಡಿಕೊಳ್ಳುತ್ತಿಲ್ಲ. ಯಾಕೆಂದರೆ, ಆಕೆ ಸ್ವಲ್ಪವೂ ಕಿರಿಕಿರಿಯಲ್ಲ.

ಅಭಿ ಬಿಡುಗಡೆಯಾಗುವ ಮುನ್ನವೆ ರಮ್ಯ ಇನ್ನೊಂದು ಚಿತ್ರದಲ್ಲಿ ಅವಕಾಶ ಪಡೆದಿದ್ದಾಳೆ. ಇದು ಅವಕಾಶಗಳ ಏಣಿಯ ಮೊದಲು ಮೆಟ್ಟಿಲು.

Read more about: kannada
English summary
Ramya, Abhi heroine gets bravo from film industry for her discipline
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada