»   » ‘ನಿರುದ್ಯೋಗಿ’ ತಂಡದಲ್ಲಿ ಅಂಬಿ, ಉಪ್ಪಿ, ಮಹೇಂದರ್‌!

‘ನಿರುದ್ಯೋಗಿ’ ತಂಡದಲ್ಲಿ ಅಂಬಿ, ಉಪ್ಪಿ, ಮಹೇಂದರ್‌!

Posted By:
Subscribe to Filmibeat Kannada


ರಾಜಕಾರಣಿ ಮತ್ತು ನಿರ್ಮಾಪಕ ಎಸ್‌.ರಮೇಶ್‌ರ ಸಿನಿ ಬೇಸಾಯದ ಲಾಭ-ನಷ್ಟಗಳು!

‘ತಂದೆಗೆ ತಕ್ಕ ಮಗ’ ಚಿತ್ರಮಂದಿರಗಳಲ್ಲಿ ಪ್ರಯಾಸದಿಂದ ಮುನ್ನುಗುತ್ತಿದ್ದಾನೆ. ಈ ಮಧ್ಯೆ ಇದೇ ತಂಡ ಹೊಸ ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಅಂಬರೀಷ್‌ ಮತ್ತು ಉಪೇಂದ್ರ ಜೋಡಿ ಇಲ್ಲೂ ಪುನರಾವರ್ತನೆಯಾಗಿದೆ.

ಕತೆ, ಚಿತ್ರಕತೆ ಜೊತೆಗೆ ನಿರ್ದೇಶನದ ಹೊಣೆಯನ್ನು ಎಸ್‌.ಮಹೇಂದರ್‌ ಅವರೇ ಹೊತ್ತಿದ್ದಾರೆ. ಚಿತ್ರದ ಹೆಸರು ‘ನಿರುದ್ಯೋಗಿ’(ಯಾರು ನಿರುದ್ಯೋಗಿ ಎಂಬುದು ಇನ್ನೂ ಪತ್ತೆಯಾಗಿಲ್ಲ!).

ನಿರ್ಮಾಪಕ ಮತ್ತು ರಾಜಕಾರಣಿ ಎಸ್‌.ರಮೇಶ್‌ ತಮ್ಮ ಪುತ್ರ ಪವನ್‌ಕುಮಾರ್‌ ಹೆಸರಲ್ಲಿ ಹೊಸ ಚಿತ್ರ ಪ್ರಕಟಿಸಿದ್ದಾರೆ. ಏ.14ರಂದು ಚಿತ್ರದ ಮುಹೂರ್ತ ನಡೆಯಲಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.

ಅಂದ ಹಾಗೇ ಈ ‘ನಿರುದ್ಯೋಗಿ’ ಅಪ್ಪಟ ಸ್ವಮೇಕ್‌ ಚಿತ್ರ. ‘ರವಿವರ್ಮ’, ‘ಚೆಲುವ’ ರೀತಿಯ ಚಿತ್ರಗಳಿಂದ ಗಾಂಧಿನಗರದಲ್ಲಿ ಕೈಸುಟ್ಟುಕೊಂಡಿರುವ ರಮೇಶ್‌, ಸಿನಿಮಾ ರಂಗ ಮಾತ್ರವಲ್ಲ, ರಾಜಕಾರಣದಲ್ಲೂ ಸದ್ಯಕ್ಕೆ ನಿರುದ್ಯೋಗಿ. ಅವರಿಗೆ ಒಳ್ಳೆಯದಾಗಲಿ.

ಕೊಸರು : ‘ದೇವರ್‌ ಮಗನ್‌’(ತಂದೆಗೆ ತಕ್ಕ ಮಗ) ಚಿತ್ರದ ರೀಮೇಕ್‌ ಹಕ್ಕುಗಳಿಗಾಗಿ ಹದಿನೈದು ಲಕ್ಷ ರೂ. ಸುರಿದಿರುವ ವಿಚಾರವನ್ನು ರಮೇಶ್‌ ಈಗ ಬಹಿರಂಗ ಪಡಿಸಿದ್ದಾರೆ. ಕನ್ನಡ ಕತೆಗಾರರಿಗೆ ಅದರ ಅರ್ಧದಷ್ಟಾದರೂ ಸಂಭಾವನೆ ಸಿಗುತ್ತಿದೆಯೆ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada