»   » ಕುಣಿಯಲಿ ಎಂಬುದು ದಾವಣಗೆರೆ ಅಭಿಮಾನಿಗಳ ಅಪೇಕ್ಷೆ.

ಕುಣಿಯಲಿ ಎಂಬುದು ದಾವಣಗೆರೆ ಅಭಿಮಾನಿಗಳ ಅಪೇಕ್ಷೆ.

Posted By: Staff
Subscribe to Filmibeat Kannada

ಅನು ಪ್ರಭಾಕರ್‌ ಇತ್ತೀಚೆಗೆ ದಾವಣಗೆರೆ ಬಂದಿದ್ದರು, ಗಂಡನೊಂದಿಗೆ!
ದಾವಣಗೆರೆ ಜಿಲ್ಲಾ ಉತ್ಸವ ಹಾಗೂ ದಾವಣಗೆರೆ ನಗರ ದೇವತೆ ದುರ್ಗಾಂಬಿಕಾ ಉತ್ಸವದ ಅಂಗವಾಗಿ ತಾರೆಯರ ದಂಡೇ ದಾವಣಗೆರೆಯಲ್ಲಿತ್ತು. ಜಿಲ್ಲಾಧಿಕಾರಿ ಕೆ.ಶಿವರಾಮು ಅವರು ಸಿನಿಮಾದಲ್ಲೇ ಹೆಚ್ಚು ಹೆಸರು ಮಾಡಿರುವುದರಿಂದ ದಾವಣಗೆರೆಗೆ ಸಿನಿಮಾದವರ ಸಹವಾಸ ಹೊಸತೇನೂ ಅಲ್ಲ . ಅನು ಪ್ರಭಾಕರ್‌ ಕೂಡ ದಾವಣಗೆರೆ ಜನತೆಗೆ ಹೊಸಬರಲ್ಲ. ಕಳೆದ ಬಾರಿ ಅನು ದಾವಣಗೆರೆಗೆ ಬಂದಾಗ ಅವರ ಮದುವೆಯೇ ಅಭಿಮಾನಿಗಳ ನಡುವೆ ಚರ್ಚೆಯ ಪ್ರಮುಖ ವಿಷಯವಾಗಿತ್ತು. ಆಗ ಅಮ್ಮ ಗಾಯತ್ರಿ ಪ್ರಭಾಕರ್‌ ಜೊತೆ ಅನು ದಾವಣಗೆರೆಗೆ ಬಂದಿದ್ದರು, ಈ ಸಾರಿ ಜೊತೆಯಲ್ಲಿ ಮಿಂಚಿದ್ದು ಗಂಡ ಕೃಷ್ಣ ಕುಮಾರ್‌.

ಅನು ಹಾಗೂ ಕೃಷ್ಣಕುಮಾರ್‌ ಅವರ ಮದುವೆಗೆ ದಾವಣಗೆರೆಯಿಂದ ಅಭಿಮಾನಿಗಳು ಬೆಂಗಳೂರಿಗೆ ಹೋಗಲು ಸಾಧ್ಯವಾಗಿರಲಿಲ್ಲ . ಆ ಕಾರಣದಿಂದಲೇ ಇಬ್ಬರೂ ಜನತೆಯೆದುರು ಮತ್ತೆ ಮದುವೆಯಾಗಲಿ ಎಂಬುದು ಶಿವರಾಮ್‌ ಆಸೆ. ಅನು-ಕುಮಾರ್‌ ಮತ್ತೆ ಮಾಲೆ ಬದಲಿಸಿಕೊಂಡರು, ನಾಚಿಕೊಂಡರು. ಅನು ಅವರಿಗೆ ಈ ಅನಿರೀಕ್ಷಿತ ಸಂದರ್ಭದಿಂದ ಒಂದೆಡೆ ಗಾಬರಿ, ಇನ್ನೊಂದೆಡೆ ಸಂಭ್ರಮ. ಈ ದ್ವಂದ್ವದಲ್ಲೇ ಅವರು ಜಿಲ್ಲಾಧಿಕಾರಿ ಶಿವರಾಮ್‌ ಅವರನ್ನು ಶಿವಕುಮಾರ್‌ ಎಂದು ಸಂಭೋದಿಸಿದರು. ಜನ ಓ.... ಅಂದಾಗ, 'ಮದುವೆಯಾಗಿ ಇನ್ನೂ ಮೂರು ತಿಂಗಳಾಗಿದೆ. ನನಗೆ ಇದೆಲ್ಲಾ ಹೊಸದು. ನಿಮಗೆ ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ" ಎಂದರು. ಜನ ಅರ್ಥ ಮಾಡಿಕೊಂಡರು.

ದಾವಣಗೆರೆಯಲ್ಲಿ ನಡೆದ 'ನನ್ನವಳು ನನ್ನವಳು" ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದನ್ನು ಅನು ಸ್ಮರಿಸಿಕೊಂಡರು. ಅದೇ ಸಮಾರಂಭದಲ್ಲಿ ಮೊದಲ ಬಾರಿಗೆ ವೇದಿಕೆಯಲ್ಲಿ ಕುಣಿದಿದ್ದೆ ಎಂದರು. ಈ ಬಾರಿ ಮಾತ್ರ ಅನು ಕುಣಿಯಲಿಲ್ಲ. ಕೃಷ್ಣ ಕುಮಾರ್‌ಗೆ ಡಾನ್ಸ್‌ ಬರೊಲ್ಲ.
ಅಂದ ಹಾಗೆ, ಅನು ಪ್ರಭಾಕರ್‌ ಈಗ ಅನು ಕೃಷ್ಣ ಕುಮಾರ್‌!

English summary
Kannada film heroine Anuprabhakar and her hubby Krishna kumar exchange garlands once again

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada