»   » ಕೋತಿಗಳು ನಿರ್ಮಾಪಕರಿಂದ ಪ್ರೇಕ್ಷಕರಿಗೊಂದು ಪತ್ರ

ಕೋತಿಗಳು ನಿರ್ಮಾಪಕರಿಂದ ಪ್ರೇಕ್ಷಕರಿಗೊಂದು ಪತ್ರ

Posted By: Staff
Subscribe to Filmibeat Kannada

ನಮ್ಮ ಮೊದಲನೆಯ ಚಿತ್ರ 'ಕುರಿಗಳು ಸಾರ್‌ ಕುರಿಗಳು" ನಿಮ್ಮ ಆಶೀರ್ವಾದದಿಂದ 125 ದಿನ ಆಚರಿಸಿತು. ನಿಮ್ಮ ಅಭಿಮಾನದಿಂದ ಪ್ರೇರಿತರಾಗಿ 'ಕೋತಿಗಳು ಸಾರ್‌ ಕೋತಿಗಳು" ಚಿತ್ರವನ್ನು ನಿರ್ಮಿಸಿದೆವು. ಈಗ ಅದೂ ನೂರು ದಿನ ಮುಗಿಸಿ ರಜತೋತ್ಸವ ಆಚರಿಸಲು ಮುನ್ನುಗ್ಗುತ್ತಿದೆ. ಇದೇ ತರಹದ ಹಾಸ್ಯ ಮನರಂಜನೆಯ ಚಿತ್ರಗಳನ್ನು ತಯಾರಿಸಲು ನಮಗೆ ಕನ್ನಡ ಜನತೆಯಿಂದ ಅಪಾರವಾದ ಬೇಡಿಕೆ ಬಂದಿದೆ. ಕೆಲವರು 'ನರಿಗಳು ಸಾರ್‌ ನರಿಗಳು" ಚಿತ್ರವನ್ನು ತಯಾರಿಸಿ ಅಂತಾ ಕೇಳಿದ್ದಾರೆ. ಕೆಲವರು 'ಕತ್ತೆಗಳು ಸಾರ್‌ ಕತ್ತೆಗಳು" 'ಹುಲಿಗಳು ಸಾರ್‌ ಹುಲಿಗಳು" 'Kಗಳು ಸಾರ್‌ Kಗಳು" 'ಕಪ್ಪೆಗಳು ಸಾರ್‌ ಕಪ್ಪೆಗಳು" 'ಕುಡುಕರು ಸಾರ್‌ ಕುಡುಕರು" ಹೀಗೆ ಹಲವಾರು ಶೀರ್ಷಿಕೆಗಳನ್ನು ಪತ್ರದ ಮೂಲಕ, ದೂರವಾಣಿ ಮೂಲಕ ನಮಗೆ ತಿಳಿಸಿದ್ದಾರೆ. ಪ್ರೇಕ್ಷಕರ ಒತ್ತಾಯದ ಮೇರೆಗೆ ರಮೇಶ್‌-ನಾರಾಯಣ್‌ ಹಾಗೂ ಮೋಹನ್‌ ಅವರ ಜೊತೆ ಒಂದು ಅದ್ದೂರಿ ಕಾಮಿಡಿ ಚಿತ್ರವನ್ನ ನಿರ್ಮಿಸಲು ಸಿದ್ಧತೆ ನಡೆಯುತ್ತಿದೆ. ಈ ಮೇಲ್ಕಂಡ ಶೀರ್ಷಿಕೆಯಲ್ಲಿ ಯಾವುದು ತಮಗೆ ಇಷ್ಟ ಎಂದು ನಮಗೆ ಕಾಗದ ಬರೆದರೆ, ಹೆಚ್ಚಿನ ಅಭಿಪ್ರಾಯ ಬಂದ ಶೀರ್ಷಿಕೆಯಲ್ಲಿ ಹೊಸ ಚಿತ್ರವನ್ನು ಶೀಘ್ರದಲ್ಲಿಯೇ ತಯಾರಿಸಿ ಬಿಡುಗಡೆಗೆ ಸಿದ್ಧ ಮಾಡುತ್ತೇವೆ. ಆದ್ದರಿಂದ ಕೂಡಲೆ ಕೆಳಕಂಡ ವಿಳಾಸಕ್ಕೆ ಕಾಗದ ಬರೆದು ಅಭಿಪ್ರಾಯ ತಿಳಿಸಿ. ಸದಾ ಪ್ರೀತಿಯಿರಲಿ.
ಇಂತಿ ನಿಮ್ಮ
- ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಜೈ ಜಗದೀಶ್‌, ವಿಜಯಲಕ್ಷ್ಮಿ ಸಿಂಗ್‌, ದುಶ್ಯಂತ್‌ ಸಿಂಗ್‌.

ಪತ್ರ ಬರೆಯ ಬೇಕಾದ ವಿಳಾಸ :
ಲಕ್ಷ್ಮಿ ಕ್ರಿಯೇಶನ್ಸ್‌
308, 1, ಅಹುಜ ಚೇಂಬರ್ಸ್‌ , ಕುಮಾರಕೃಪ ರೋಡ್‌
ಬೆಂಗಳೂರು- 560 001.

English summary
Suggest titles for Rajendra singh babus new movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada