»   » ಚುಂಬಕ ಗಾಳಿಯ ಸುಳಿಯಲ್ಲಿ ಮೀರಾ

ಚುಂಬಕ ಗಾಳಿಯ ಸುಳಿಯಲ್ಲಿ ಮೀರಾ

Posted By:
Subscribe to Filmibeat Kannada

ಬೆಂಗಳೂರು : ಪಾಕಿಸ್ತಾನದ ಮಾಧುರಿ ದೀಕ್ಷಿತ್‌ ಎಂದೇ ಗುರ್ತಿಸಲ್ಪಡುವ ಮೀರಾ ನಾಯಕಿಯಾಗಿ ಅಭಿನಯಿಸಿರುವ ಮೊದಲ ಹಿಂದಿ ಚಿತ್ರ ‘ನಜರ್‌’ ಮೇ 20ರಂದು ಬಿಡುಗಡೆಯಾಗುತ್ತಿದೆ. ಅವರ ಚುಂಬನದ ವಿವಾದ ಚಿತ್ರಕ್ಕೆ ವಿಶೇಷ ಪ್ರಚಾರ ನೀಡುತ್ತಿದೆ.

ಚಿತ್ರದ ಪ್ರಚಾರದ ಹಿನ್ನೆಲೆ ಗುರುವಾರ ನಗರಕ್ಕೆ ನಟಿ ಮೀರಾ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಚಿತ್ರದಷ್ಟೇ ಖುಷಿ, ಕುತೂಹಲ ಮತ್ತು ಆತಂಕದಿಂದ ನಜರ್‌ ಚಿತ್ರದ ಬಿಡುಗಡೆಯ ಕ್ಷಣಗಣನೆಯಲ್ಲಿದ್ದೇನೆ. ಯಾಕೆ ದಿನಗಳು ಬೇಗಬೇಗ ಉರುಳುತ್ತಿಲ್ಲ ಎನಿಸುತ್ತಿದೆ ಎಂದರು.

ಇವತ್ತು ಯಾವ ವಾರ? ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ? ಎಂದು ಪದೇಪದೇ ನಿರ್ದೇಶಕ ಮಹೇಶ್‌ಭಟ್‌ ಅವರನ್ನು ಕೇಳುತ್ತಿದ್ದೇನೆ ಎಂದ ಮೀರಾ, ಚಿತ್ರವು ಎಲ್ಲರ ಮನರಂಜಿಸುವಂತೆ ಸುಂದರವಾಗಿ ಮೂಡಿ ಬಂದಿದೆ. ಭಾರತೀಯ ಪ್ರೇಕ್ಷರು ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು. ನಜರ್‌ ಚಿತ್ರವು ಭಾರತ ಮತ್ತು ಪಾಕಿಸ್ತಾನಗಳ ಸ್ನೇಹಕ್ಕೆ ಉಡುಗೊರೆ ಎಂದು ಹೇಳಿದರು.

ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಸಂಬಂಧಗಳು ಪ್ರಸ್ತುತ ಸುಧಾರಿಸುತ್ತಿವೆ. ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಭಾರತಕ್ಕೆ ಭೇಟಿಕೊಟ್ಟಾಗ ನಟಿ ರಾಣಿ ಮುಖರ್ಜಿಯವರನ್ನೂ ಭೇಟಿ ಮಾಡಿದ್ದರು. ಬಾಲಿವುಡ್‌ ಕಲಾವಿದರು ಪಾಕಿಸ್ತಾನಿ ಚಿತ್ರಗಳಲ್ಲಿ ಅಭಿನಯಿಸುವಂತೆ ಆಹ್ವಾನಿಸಿದ್ದರು ಎಂದು ಮೀರಾ ಭಾರತ-ಪಾಕ್‌ ಸಂಬಂಧಗಳನ್ನು ಮೆಲುಕು ಹಾಕಿದರು.

ನನಗೆ ಬಾಲಿವುಡ್‌ನಲ್ಲಿ ಇನ್ನೂ ಹೆಚ್ಚು ಕೆಲಸಮಾಡುವ ಆಸೆ ಇದೆ. ಆದರೆ ಭಾರತದಲ್ಲೇ ಉಳಿದುಕೊಳ್ಳುವ ಇರಾದೆಯೇನಿಲ್ಲ . ಮಹೇಶ್‌ ಭಟ್‌ ಅವರ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದು, ಚಿತ್ರವು ಜುಲೈನಲ್ಲಿ ಆರಂಭಗೊಳ್ಳಲಿದೆ. ಲಂಡನ್‌ನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೀರಾ ನುಡಿದರು.

‘ನಜರ್‌’ ಬಗ್ಗೆ ಕೆಂಡ : ಮೀರಾ ಅಭಿನಯದ ನಜರ್‌ ಚಿತ್ರದ ಬಗ್ಗೆ ಪಾಕಿಸ್ತಾನಿ ಮೂಲಭೂತವಾದಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಚಿತ್ರದಲ್ಲಿನ ಚುಂಬನ ದೃಶ್ಯಗಳ ಬಗ್ಗೆ ಜಿಗುಪ್ಸೆಗೊಂಡಿರುವ ಮೂಲಭೂತವಾದಿಗಳಿಂದ ಮೀರಾ ಅವರಿಗೆ ಜೀವ ಬೆದರಿಕೆಯಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚಿತ್ರ ಕುತೂಹಲ ಮೂಡಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮೀರಾ, ನಾನು ಅಂತಹ ದೃಶ್ಯಗಳಲ್ಲಿ ನಟಿಸಿಲ್ಲ. ಅವು ಚುಂಬನದಂತೆ ಕಾಣುವ ದೃಶ್ಯಗಳಾಗಿದ್ದು, ನಾನು ಸಹ ನಟನೊಂದಿಗೆ ತುಟಿಗೆ ತುಟಿಯನ್ನು ಬೆಸೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಅಮೆರಿಕಾದ ಸೌಂದರ್ಯವರ್ಧಕಗಳ ಉತ್ಪಾದನಾ ಸಂಸ್ಥೆ ಜೋಲೆನ್‌ ಇನ್‌ಕಾರ್ಪೊರೇಷನ್‌ನ ಬ್ರಾಂಡ್‌ ಅಂಬಾಸಿಡರ್‌ ಆಗಿ ಮೀರಾ ಆಯ್ಕೆಯಾಗಿದ್ದಾರೆಂದು ಪ್ರಕಟಣೆ ತಿಳಿಸಿದೆ.

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X