»   » ದೊಡ್ಡ ಮನಸ್ಸು ಮಾಡಿ ನಮ್ಮನ್ನು ಕ್ಷಮಿಸಿ - ಪಾರ್ವತಮ್ಮ

ದೊಡ್ಡ ಮನಸ್ಸು ಮಾಡಿ ನಮ್ಮನ್ನು ಕ್ಷಮಿಸಿ - ಪಾರ್ವತಮ್ಮ

Subscribe to Filmibeat Kannada

ಬೆಂಗಳೂರು : ಡಾ.ರಾಜ್‌ಕುಮಾರ್‌ ಅಂತ್ಯಕ್ರಿಯೆ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದಲ್ಲಿ ಮೃತರಾದವರ ಕುಟುಂಬಗಳಿಗೆ ರಾಜ್‌ ಕುಟುಂಬ ಪರಿಹಾರಧನ ವಿತರಿಸಿ, ಸಾಂತ್ವನ ಹೇಳಿತು.

ಪಾರ್ವತಮ್ಮ ರಾಜ್‌ಕುಮಾರ್‌ ಮೃತರ ಕುಟುಂಬದವರಿಗೆ ತಲಾ 50 ಸಾವಿರ ರೂಪಾಯಿ ಚೆಕ್‌ ನೀಡಿ ಭಾವುಕವಾಗಿ ಕಣ್ಣೀರು ಸುರಿಸಿದರು. ಸಮಾಧಾನ ಮಾಡಿಕೊಳ್ಳಿ, ನಾವೊಂದು ರೀತಿಯಲ್ಲಿ ಕಳೆದುಕೊಂಡಿದ್ದೇವೆ. ನೀವೊಂದು ರೀತಿಯಲ್ಲಿ ಕಳೆದುಕೊಂಡಿದ್ದೀರಿ. ಇಬ್ಬರದೂ ಹೆಚ್ಚೂಕಡಿಮೆ ಒಂದೇ ಸ್ಥಿತಿ ಎನ್ನುತ್ತಾ ಗದ್ಗದಿತರಾದರು.

ದೊಡ್ಡ ಮನಸ್ಸು ಮಾಡಿ ನಮ್ಮನ್ನು ಕ್ಷಮಿಸಿ ಎಂದು ಕೈ ಮುಗಿದು ಕಣ್ಣೀರುಗರೆದರು. ಆನಂತರ ತೀರ ಭಾವುಕವಾದ ಪಾರ್ವತಮ್ಮ ಅವರಿಗೆ ಮಾತನಾಡಲು ಆಗಲಿಲ್ಲ.

ಸರ್ಕಾರ ಘೋಷಿಸಿರುವ ಪರಿಹಾರ ಧನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಳಿಕೊಳ್ಳುತ್ತೇವೆ ಎಂದು ರಾಜ್‌ ಪುತ್ರರಾದ ಶಿವರಾಜ್‌ಕುಮಾರ್‌, ರಾಘವೇಂದ್ರರಾಜ್‌ಕುಮಾರ್‌ ಹಾಗೂ ಪುನೀತ್‌ರಾಜ್‌ಕುಮಾರ್‌ ಭರವಸೆ ನೀಡಿದರು.

ಮೃತ ಪೊಲೀಸ್‌ ಪೇದೆ ಮಂಜುನಾಥ್‌ ಮಲ್ಲಾಡಿ ಅವರ ಕುಟುಂಬ ವರ್ಗ ಹೊರತು ಪಡಿಸಿ, ಉಳಿದ ಏಳು ಕುಟುಂಬದವರು ಸದಾಶಿವನಗರದ ರಾಜ್‌ ನಿವಾಸಕ್ಕೆ ಆಗಮಿಸಿ ಚೆಕ್‌ ಪಡೆದರು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada