»   » ಫಿಲ್ಮಫೇರ್‌ಪ್ರಶಸ್ತಿ: ಸುದೀಪ್‌ಶ್ರೇಷ್ಠ ನಟ-ನಿರ್ಮಾಪಕ, ಮೀನಾ ಶ್ರೇಷ್ಠನಟಿ

ಫಿಲ್ಮಫೇರ್‌ಪ್ರಶಸ್ತಿ: ಸುದೀಪ್‌ಶ್ರೇಷ್ಠ ನಟ-ನಿರ್ಮಾಪಕ, ಮೀನಾ ಶ್ರೇಷ್ಠನಟಿ

Posted By: Staff
Subscribe to Filmibeat Kannada

ಚೆನ್ನೈ: 2003ನೇ ಸಾಲಿನ ಫಿಲ್ಮಫೇರ್‌ ಪ್ರಶಸ್ತಿ ಪ್ರಕಟಗೊಂಡಿದೆ. ಸುದೀಪ್‌, 'ಸ್ವಾತಿ ಮುತ್ತು" ಚಿತ್ರದ ನಿರ್ಮಾಣ ಹಾಗೂ ಶ್ರೇಷ್ಠ ನಟನೆಗಾಗಿ ಎರಡು ಪ್ರಶಸ್ತಿಗ ಪಡೆದಿದ್ದಾರೆ. ಇದೇ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಮೀನಾ ಶ್ರೇಷ್ಠ ನಾಯಕಿ ಪ್ರಶಸ್ತಿ ಪಡೆದಿದ್ದಾರೆ.

ತಮಿಳು, ತೆಲುಗು, ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ನಾಲ್ಕು ಭಾಷೆಗಳ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಜೀವಮಾನ ಸಾಧನೆ ಪ್ರಶಸ್ತಿ ಜೇಸುದಾಸ್‌ ಹಾಗೂ ವಿಜಯ ಶಾಂತಿ ಅವರಿಗೆ ಲಭಿಸಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಜೂನ್‌ 12ರಂದು ಚೆನ್ನೈನಲ್ಲಿ ನಡೆಯಲಿದೆ.

ಯಾವಾಗಲೂ ಹೊಸತನಕ್ಕೆ ಕೈ ಹಾಕುವ ಸುದೀಪ್‌ಗೆ ಪ್ರಶಸ್ತಿ ಹೊಸತೇನಲ್ಲ. ಈ ಪ್ರಶಸ್ತಿಯ ಮೂಲಕ ಸುದೀಪ್‌ ಕನ್ನಡದಲ್ಲಿ ಫಿಲ್ಮ್‌ಫೇರ್‌ ಪ್ರಶಸ್ತಿ ಸತತ ನಾಲ್ಕನೇ ಬಾರಿ ಪಡೆದ ಏಕೈಕ ನಟರಾಗಿದ್ದಾರೆ. ಪ್ರಶಸ್ತಿಗಳಿಂದ ಎಲ್ಲೋ ನಾವು ನಿರ್ಲಕ್ಷಕ್ಕೊಳಗಾಗಿದ್ದೇವೆನೋ ಎನ್ನುವ ಬೇಸರ ದೂರವಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಚಲನಚಿತ್ರ ಪ್ರಶಸ್ತಿಗಳ ವಿವರ:

ಅತ್ಯುತ್ತಮ ಚಿತ್ರ- ಪ್ಯಾರಿಸ್‌ ಪ್ರಣಯ (ನಾಗತಿಹಳ್ಳಿ ಚಂದ್ರಶೇಖರ್‌)
ಅತ್ಯುತ್ತಮ ನಿರ್ದೇಶಕ- ಅರುಣ್‌ ಪ್ರಸಾದ್‌ (ಕಿಚ್ಚ)
ಅತ್ಯುತ್ತಮ ನಟ- ಸುದೀಪ್‌

English summary
Sudeep bags his 4th carrier best actor film fare award for Swathimuthu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada