»   » ಉಪೇಂದ್ರ ತೆರೆಯಲ್ಲಿದ್ದರೂ ಸುದ್ದಿ; ಮರೆಯಲ್ಲಿದ್ದರೂ ಸುದ್ದಿ

ಉಪೇಂದ್ರ ತೆರೆಯಲ್ಲಿದ್ದರೂ ಸುದ್ದಿ; ಮರೆಯಲ್ಲಿದ್ದರೂ ಸುದ್ದಿ

Posted By: Staff
Subscribe to Filmibeat Kannada

ಕೆಲವು ವ್ಯಕ್ತಿತ್ವಗಳೇ ಹಾಗೆ! ಅವರು ತೆರೆಯಲ್ಲಿದ್ದರೂ ಸುದ್ದಿ; ಮರೆಯಲ್ಲಿದ್ದರೂ ಸುದ್ದಿ. ಅವರು ಸದಾ ಸುದ್ದಿಯಲ್ಲೇ ಇರುವವರು. ಸುದ್ದಿ ಎಂಬುದು ತಾರೆಯರಿಗೆ ಜೀವಂತಿಕೆ ನೀಡುತ್ತದೆ. ಅದು ನೀಡದಿದ್ದಾಗ ಅವರು ಸುದ್ದಿಗೆ ಜೀವ ನೀಡುತ್ತಾರೆ. ಇದೊಂದು ಅವಿನಾಭಾವ ಸಂಬಂಧ. ಇದು ಉಪ್ಪಿನ ರುಚಿ ಕಂಡೋರ ಸುದ್ದಿ.

ಸ್ಯಾಂಡಲ್‌ವುಡ್‌ನಲ್ಲಿ ಕೆಲವರಿಗೆ ಉಪ್ಪಿಗಿಂತ ರುಚಿ ಬೇರೆ ಇಲ್ಲ. ಆದ್ರೆ ಇತ್ತೀಚೆಗಿನ ದಿನಗಳಲ್ಲಿ ಉಪ್ಪಿನ ಚಿತ್ರಾನೆ ಕಾಣ್ತಾ ಇಲ್ಲ. ಈ ಮಧ್ಯೆ ಅವರ ಅಭಿನಯದ ಓಂಕಾರದ ಚಿತ್ರೀಕರಣ ಮುಗಿದಿದೆ. ಸಹಜವಾಗಿ ಉಪ್ಪಿಯ ಚಿತ್ರವೆಂದರೆ ಅಬ್ಬರದ ಪ್ರಚಾರವಿರುತ್ತದೆ. ಯಾಕೋ ಓಂಕಾರದ ಜಾಹಿರಾತುಗಳೇ ಕಾಣಿಸುತ್ತಿಲ್ಲ!

ಮದುವೆಯಾದ ತಕ್ಷಣ ನಟಿಮಣಿಯರ ಬೇಡಿಕೆ ಇಳಿಕೆಯಾಗುತ್ತದೆ. ಆದರೆ ಉಪ್ಪಿಯ ಮಡದಿ ಪ್ರಿಯಾಂಕ ಪ್ರಸಿದ್ಧಿ ಏರಿತ್ತು. ಉಪ್ಪಿಯೇ ಕಾಣಿಸಿಕೊಳ್ಳುವುದು ವಿರಳವಾಯಿತು. ಇದಕ್ಕೆ ಮಲ್ಲ ಚಿತ್ರ ಕಾರಣವೇ? ಮಲ್ಲ ಚಿತ್ರದ ಮಹಿಮೆಗಿಂತ ಅದರ ಬೆನ್ನಹಿಂದ ಬಂದ ವರದಿಗಳಿಂದ ಚಿತ್ರ ನೂರು ದಿನ ಓಡುತ್ತಿದೆ ಎಂಬುದು ಗಾಂಧಿ ನಗರದ ಗುಲ್ಲು.

ನೋಡಬಾರ್ದನ್ನ್‌ ನೋಡ್ದೆ... ಅನ್ನೋ ಪರಿಸ್ಥಿತಿ ಉಪ್ಪಿಗೆ ಬಂದಿತ್ತೇ? ಪತಿ-ಪತ್ನಿ ಮಾತ್ರ ಹಾಯಾಗಿದ್ದಾರಂತೆ. ಮೌನ ಎಲ್ಲವನ್ನೂ ಮರೆಮಾಡುತ್ತದೆ ಎಂಬುದು ಉಪ್ಪಿಯ ತತ್ವ. ನೆನಪುಗಳು ಕ್ಷಣಿಕ!

ಪ್ರೀತಿರಿkುಂಗಾನಿಯಾ ಜೊತೆ ನಟಿಸಿರುವ ಓಂಕಾರ ಚಿತ್ರ ಬಿಡುಗಡೆಗೆ ಅಣಿಯಾಗಿದೆ. ಉಪೇಂದ್ರ ಪತ್ನಿಗೆ ಐದು ತಿಂಗಳೆಂಬ ವರದಿ ಅದಕ್ಕಿಂತ ಮೊದಲೇ ಬಂದಿದೆ. ಉಪ್ಪಿ ಮುಟ್ಟಿದೆಲ್ಲ ಸುದ್ದಿ!

ಉಪೇಂದ್ರ ಸೋಲು ಕಾಣಲು ಆರಂಭಿಸಿದ್ದು ನಿರ್ದೇಶನ ತೊರೆದ ಮೇಲೆ. ಬಳಿಕ ಸತತ ರಿಮೇಕ್‌ ಚಿತ್ರದ ನಟನೆಯೂ ಅವರ ಇಮೇಜ್‌ಗೆ ಸ್ವಲ್ಪ ಧಕ್ಕೆ ತಂದವು. ಉಪೇಂದ್ರ ನಿರ್ದೇಶನದ ಚಿತ್ರಗಳಷ್ಟು ಅವರ ನಟನೆಯ ಚಿತ್ರಗಳಿಗೆ ಯಶಸ್ಸು ಬರಲಿಲ್ಲ. ಈ ಮಧ್ಯೆ ಯಾವುದೇ ನಟರ ಚಿತ್ರಗಳೂ ಮಹತ್ತರ ಯಶಸ್ಸು ಗಳಿಸದಿರುವುದು ಅವರಿಗೆ ಸ್ವಲ್ಪ ನೆಮ್ಮದಿ ನೀಡಬಹುದು ಎಂದು ಉಪೇಂದ್ರ ಅಭಿಮಾನಿಯಾಬ್ಬರು ಹೇಳಿದ್ದಾರೆ.

ಇತ್ತೀಚೆಗೆ ಏಟ್ರಿಯಾ ಹೋಟೆಲ್‌ನಲ್ಲಿ ಉಪೇಂದ್ರ ಮೊನಾಲಿಸಾ ಚಿತ್ರ ವೀಕ್ಷಿಸಿದ್ದರು. ಅಲ್ಲದೇ ಚಿತ್ರಕ್ಕೆ ಮೆಚ್ಚಿಗೆ ಸೂಚಿಸಿದ್ದಾರೆ. ಇಂದುಜಿತು ಉಪೇಂದ್ರ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದಾರೆ. ಪ್ರಾಯಶಃ ಇಂದ್ರಜಿತು ನಿರ್ದೇನದಲ್ಲಿ ಉಪೇಂದ್ರ ನಾಯಕ? ಉಪ್ಪಿಯ ಹೊಸ ವರಸೆ ಏನೆಂದು ಕಾದುನೋಡೋಣ ...

English summary
Upendra, the actor in news always

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada