»   »  ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Subscribe to Filmibeat Kannada
Dr.Rajkumar Rajyotsava award
ಡಾ.ರಾಜ್ ಕುಮಾರ್ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಗುರುವಾರ (ಮೇ7) ಸಂಜೆ 4.30ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಕೆ ಜಿ ರಸ್ತೆಯಲ್ಲಿರುವ ಶಿಕ್ಷಕರ ಸದನದಲ್ಲಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು.

ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಶತವಧಾನಿ ಆರ್ ಗಣೇಶ್, ಜಿ.ವೆಂಕಟಸುಬ್ಬಯ್ಯ, ಜಿ.ನಾರಾಯಣ, ಎಂ ಎನ್ ವೆಂಕಟಾಚಲಯ್ಯ, ಉದಯ ಹೊಳ್ಳ, ರವಿಚಂದ್ರನ್, ಜಯಂತಿ, ಶಂಕರ ಬಿದರಿ, ಸ್ಯಾಕ್ಸೊಫೋನ್ ವಾದಕ ಆರ್ ಮಂಜುನಾಥ್, ಕಾದಂಬರಿಕಾರ ಅರವಿಂದ ಅಡಿಗ ಸೇರಿದಂತೆ ವಿವಿಧ ಕ್ಷೇತ್ರದ 47 ಮಂದಿ ಸಾಧಕರಿಗೆ 'ಡಾ.ರಾಜ್ ಕುಮಾರ್ ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ ಮಾಡಲಿದ್ದಾರೆ.

ಆದಿಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ ಸಾನಿಧ್ಯ ದಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪಾರ್ವತಮ್ಮ ರಾಜ್ ಕುಮಾರ್, ಸಚಿವ ರಾಮಚಂದ್ರೇಗೌಡ, ಮಾಜಿ ಕೇಂದ್ರ ಸಚಿವ ಅನಂತಕುಮಾರ್, ಬೆಂಗಳೂರು ದೂರದರ್ಶನ ಕೇಂದ್ರ ನಿರ್ದೇಶಕ ಡಾ.ಮಹೇಶ್ ಜೋಷಿ, ಎಂ ಲಕ್ಷ್ಮಿನಾರಾಯಣ ಭಾಗವಹಿಸುವರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಬಂಗಾರದ ಮನುಷ್ಯ ಡಾ.ರಾಜ್ ಹುಟ್ಟುಹಬ್ಬ
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
ಅಭಿಮಾನಿಗೆ ಸ್ಪೂರ್ತಿಯಾದ ರಾಜ್ ಕುಮಾರ್
'ಡಾ.ರಾಜ್ ಜೀವನಧಾರೆ' ಡಿವಿಡಿ ಬಿಡುಗಡೆ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada