»   » ಗೂಢಚಾರಿಣಿಯ ಜಾಡು ಅರಸಿ ಹೊರಟ ಶ್ಯಾಮ್ ಬೆನಗಲ್‌

ಗೂಢಚಾರಿಣಿಯ ಜಾಡು ಅರಸಿ ಹೊರಟ ಶ್ಯಾಮ್ ಬೆನಗಲ್‌

Posted By:
Subscribe to Filmibeat Kannada


ನವದೆಹಲಿ, ನ.05: ಬ್ರಿಟೀಷ್ ಗೂಢಾಚಾರಳಾಗಿ ಕಾರ್ಯನಿರ್ವಹಿಸಿದ್ದ ಟಿಪ್ಪು ವಂಶಸ್ಥೆಯೊಬ್ಬಳ ಬಗ್ಗೆ ಶ್ಯಾಮ್ ಬೆನಗಲ್ ಚಿತ್ರವನ್ನು ನಿರ್ಮಿಸಲಿದ್ದಾರೆ. ಬಸು ರಚಿಸಿದ 'The princess spy" ಎಂಬ ಆಂಗ್ಲ ಕೃತಿ ಆಧರಿಸಿ ಚಿತ್ರ ನಿರ್ಮಾಣವಾಗಲಿದೆ.

ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಿಪ್ಪು ವಂಶಸ್ಥಳಾದ ನೂರ್-ಉನ್-ನಿಸಾ ಇನಾಯತ್ ಖಾನ್ ಗೂಢಚಾರಿಣಿಯಾಗಿದ್ದಳು. ಈಕೆ ಬ್ರಿಟೀಷ್ ಪರ ಜರ್ಮನರ ವಿರುದ್ಧ ಗೂಢಚಾರಳಾಗಿ ಕಾರ್ಯನಿರ್ವಹಿಸಿ ನಾಜಿಗಳಿಗೆ ಸಿಂಹಸ್ವಪ್ನವಾಗಿದ್ದಳು. ಕೆಲವೊಂದು ಕ್ಲಿಷ್ಟ ಪರಿಸ್ಥಿತಿಗಳಲ್ಲಿ ರೇಡಿಯೋ ಆಪರೇಟರ್ ಆಗಿಯೂ ಕೆಲಸ ಮಾಡಿದ್ದಳು.

ಇನಾಯತ್ ಖಾನ್ ಬಗ್ಗೆ ಒಂದಿಷ್ಟು :

ಈಕೆಯ ತಂದೆ ಭಾರತೀಯ ಹಾಗೂ ತಾಯಿ ಅಮೆರಿಕಾ ಮೂಲದವರು. ಹುಟ್ಟಿದ್ದು 1914ರಲ್ಲಿ. ಇವರ ಕುಟುಂಬ ಕೆಲಕಾಲ ಲಂಡನ್ ಮತ್ತು ಪ್ಯಾರಿಸ್‌ನಲ್ಲಿತ್ತು. ಫ್ರಾನ್ಸ್ ಪತನದ ನಂತರ ಇವರ ಕುಟುಂಬವು 1941ರಲ್ಲಿ ಇಂಗ್ಲೆಂಡ್‌ಗೆ ಸ್ಥಳಾಂತರವಾಯಿತು. 'ಮೆಡಲೀನ್" ಎಂಬ ರಹಸ್ಯ ಹೆಸರಿನೊಂದಿಗೆ ವ್ಯವಹರಿಸುತ್ತಿದ್ದಳು ಇನಾಯತ್ ಖಾನ್. 1943ರಲ್ಲಿ ಈಕೆಯನ್ನು ಬಂಧಿಸಲಾಯಿತು. ಅಲ್ಲಿಂದಲೂ ತಪ್ಪಿಸಿಕೊಂಡ ಇವಳನ್ನು ಕೇವಲ ಎರಡು ತಾಸಿನಲ್ಲಿ ಬಂಧಿಸಿದರು. 1944ರಲ್ಲಿ ಈಕೆಯನ್ನು ಗುಂಡಿಟ್ಟು ಕೊಲ್ಲಲಾಯಿತು. ಇದು ಗೂಢಚಾರಿಣಿಯ ಹಿಂದಿನ ಕತೆ. ಕಲಾತ್ಮಕ ಚಿತ್ರಗಳಿಗೆ ಹೆಸರಾದ ಶ್ಯಾಮ್ ಬೆನಗಲ್ ಇದನ್ನು ತೆರೆಯ ಮೇಲೆ ಹೇಗೆ ತರುತ್ತಾರೋ ಎಂಬ ಕುತೂಹಲ ಪ್ರೇಕ್ಷಕರಿಗೆ ಇದ್ದೇ ಇದೆ.

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada