»   » ನಟ-ನಟಿಯರು ಬೇಕಾಗಿದ್ದಾರೆ, ನೀವೊಂದ್‌ ಕೈ ನೋಡಿ ಹಂಗಾದ್ರೆ

ನಟ-ನಟಿಯರು ಬೇಕಾಗಿದ್ದಾರೆ, ನೀವೊಂದ್‌ ಕೈ ನೋಡಿ ಹಂಗಾದ್ರೆ

Posted By:
Subscribe to Filmibeat Kannada

ಹುಡುಗಿಯರಾದರೆ ವಯಸ್ಸು 18- 20 ಆಗಿರಬೇಕು. ಹುಡುಗರಾದರೆ 22- 25 ವಯೋಮಿತಿಯವರಾಗಿರಬೇಕು. ಸ್ಕೂಲು ಅಥವಾ ಕಾಲೇಜಲ್ಲಿ ಬಣ್ಣ ಹಾಕಿಕೊಂಡು ನಟಿಸಿರುವ ಅನುಭವ ಇರಬೇಕು. ಸ್ಫುರದ್ರೂಪಿಯಾಗಿದ್ದು, ತೆಳುವಾಗಿದ್ದರೆ ಆದ್ಯತೆ.

ಇವಿಷ್ಟೂ ಭೌತಿಕ ಗುಣಗಳು ನಿಮ್ಮದಾಗಿದ್ದು, ಮಾನಸಿಕವಾಗಿಯೂ ನಟನೆಗೆ ಒಗ್ಗಿಕೊಳ್ಳುವ ಮನಸ್ಸು ನಿಮ್ಮದಾಗಿದ್ದರೆ ಭಾನುವಾರ (ಜು.6) 10.30ಕ್ಕೆ ಸರಿಯಾಗಿ ಬೆಂಗಳೂರಿನ ಚಿತ್ರಕಲಾ ಪರಿಷತ್‌ ಪಕ್ಕ ಇರುವ ಗಾಂಧಿಭವನಕ್ಕೆ ಬನ್ನಿ. ಅಲ್ಲಿ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ನಿಮಗಾಗಿ ಕಾಯುತ್ತಿರುತ್ತಾರೆ.

ತಮ್ಮ ಪುತ್ರ ದುಶ್ಯಂತ್‌ ಸಿಂಗ್‌ನನ್ನು ನಾಯಕನಾಗಿ ಪರಿಚಯಿಸುತ್ತಿರುವ ‘ಲವ್‌’ ಚಿತ್ರಕ್ಕೆ ಅವರು ನಟ/ನಟಿಯರ ತಲಾಷಿನಲ್ಲಿದ್ದಾರೆ. ಗುಡ್‌ ಲಕ್‌.

ಸಂದರ್ಶನ ನಡೆಯುವ ಜಾಗದ ಪೂರ್ಣ ವಿಳಾಸ ಹೀಗಿದೆ- ಗಾಂಧಿಭವನ, ಶಿವಾನಂದ ಸರ್ಕಲ್‌ ಹತ್ತಿರ, ಚಿತ್ರಕಲಾ ಪರಿಷತ್‌ ಪಕ್ಕ, ಬೆಂಗಳೂರು.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada