ಕತೆ ಬರೆದು ಕರೋಡ್‌ಪತಿಯಾಗಿ..:ಸುಭಾಷ್ ಘಾಯ್

By Staff

ಮುಂಬಯಿ : ಒಳ್ಳೆ ಕತೆಯಿಲ್ಲ, ಚಿತ್ರಕತೆಯಿಲ್ಲ ಎಂಬ ಕೊರಗು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಇದೆ. ಒಳ್ಳೆ ಚಿತ್ರಕತೆ ಬರೆದುಕೊಟ್ಟವರಿಗೆ 1 ಕೋಟಿ ಸಂಭಾವನೆ ನೀಡುವುದಾಗಿ ನಿರ್ಮಾಪಕ ಮತ್ತು ನಿರ್ದೇಶಕ ಸುಭಾಷ್ ಘಾಯ್ ಘೋಷಿಸಿದ್ದಾರೆ.

ಚಿತ್ರವೊಂದರ ತಯಾರಿಕೆಗಾಗಿ 20-30ಕೋಟಿಯನ್ನು ವ್ಯಯಿಸಲಾಗುತ್ತದೆ. ಹೀಗಾಗಿ ಚಿತ್ರಕತೆ ಬರೆದವರಿಗೆ 1 ಕೋಟಿ ಸಂಭಾವನೆ ನೀಡುವುದು ತಪ್ಪೇನಲ್ಲ. ಆ ಮೂಲಕ ಕ್ರಿಯಾಶೀಲರನ್ನು ಬೆಂಬಲಿಸಬಹುದು ಎಂಬುದು ಸುಭಾಷ್ ಘಾಯ್ ಅಭಿಪ್ರಾಯ.

ಕತೆಗಾರರೇ, ಇನ್ನೇಕೆ ತಡ ಪೆನ್ನು ಪೇಪರ್ ಕೈಗೆತ್ತಿಕೊಳ್ಳಿ.. ಕ್ರಿಯಾಶೀಲತೆಯನ್ನು ಪ್ರದರ್ಶಿಸಿ.. ಕರೋಡ್ ಪತಿಯಾಗಿ!


(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X