»   » ತಾವಿನ್ನು ರಿಮೇಕ್‌ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಶಿವಣ್ಣ

ತಾವಿನ್ನು ರಿಮೇಕ್‌ ಚಿತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಶಿವಣ್ಣ

Posted By: Staff
Subscribe to Filmibeat Kannada

ಜುಲೈ 12 ರಂದು ಶಿವರಾಜ್‌ಕುಮಾರ್‌ ಹುಟ್ಟುಹಬ್ಬ!
ಅದು ಶಿವಣ್ಣನ 41 ನೇ ಬರ್ತಡೇ. ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು ಅಭಿಮಾನಿಗಳೂ ಸಿದ್ಧರಾಗಿದ್ದಾರೆ. ಅಖಿಲ ಕರ್ನಾಟಕ ಶಿವರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಶಿವಣ್ಣನ ಬರ್ತಡೇ ಉಸ್ತುವಾರಿ ವಹಿಸಿಕೊಂಡಿದೆ.

ವೈಯಾಲಿಕಾವಲ್‌ನ ಮೈದಾನದಲ್ಲಿ ಜುಲೈ 12 ರ ಸಂಜೆ 6 ಗಂಟೆಗೆ ಹುಟ್ಟುಹಬ್ಬದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕಾಗಿಯೇ ವರ್ಣರಂಗ ಎನ್ನುವ ವಿಶೇಷ ಮಂಟಪ ರೂಪಿಸಲಾಗುತ್ತಿದೆ.

ಕಳೆದ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಾವಿನ್ನು ಮುಂದೆ ರಿಮೇಕ್‌ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಶಿವಣ್ಣ ಶಪಥ ಮಾಡಿದ್ದರು. ಅವರು ತಮ್ಮ ಮಾತನ್ನು ಈವರೆಗೆ ಉಳಿಸಿಕೊಂಡಿದ್ದಾರೆ. ಅವರು ನಟಿಸುತ್ತಿರುವ ಚಿತ್ರಗಳು- 'ಸ್ಮೈಲ್‌, ತವರಿಗೆ ಬಾ ತಂಗಿ, ಜಿಲ್ಲಾಧಿಕಾರಿ" ಎಲ್ಲವೂ ಸ್ವಮೇಕ್‌! ಕೋಡ್ಲು ಅವರೊಂದಿಗಿನ ವಿರಸವನ್ನು ಮರೆತಿರುವ ಶಿವಣ್ಣ, ಪೂರ್ಣಚಂದ್ರ ತೇಜಸ್ವಿ ಅವರ ಕಾದಂಬರಿ ಆಧಾರಿತ 'ಜುಗಾರಿ ಕ್ರಾಸ್‌" ಚಿತ್ರದಲ್ಲೂ ನಟಿಸುವುದಾಗಿ ಹೇಳಿದ್ದಾರೆ.

ಈ ನಡುವೆ ಶಿವರಾಮ ಕಾರಂತರ ಕಾದಂಬರಿ ಆಧಾರಿತ 'ಚಿಗುರಿದ ಕನಸು" ಚಿತ್ರಕ್ಕಾಗಿ ಸ್ಕಿೃಪ್ಟ್‌ ತಯಾರಿ ನಡೆಯುತ್ತಿದೆಯಂತೆ. ಇದು ಶಿವಣ್ಣನ ಮಹತ್ವಾಕಾಂಕ್ಷೆಯ ಚಿತ್ರ. ನಾಗಾಭರಣ ಇದರ ನಿರ್ದೇಶಕರು.

English summary
Kannada filmdom : Shivarajkumar to celebrate his birthday on July 12th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada