»   » ಈ ವಾರ ಉಪ್ಪಿ ‘ನ್ಯೂಸ್‌’

ಈ ವಾರ ಉಪ್ಪಿ ‘ನ್ಯೂಸ್‌’

Subscribe to Filmibeat Kannada

ಉಪೇಂದ್ರ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ನ್ಯೂಸ್‌’ ಅಂತೂಇಂತೂ ಶುಕ್ರವಾರ(ಆ.5) ತೆರೆಕಂಡಿದೆ. ಕ್ರೆೃಮ್‌ ಪರ್ತಕರ್ತನ ಸವಾಲು, ಕಷ್ಟ-ನಷ್ಟಗಳನ್ನು ಹೊತ್ತು ತಂದಿರುವ ಈ ಚಿತ್ರ ಉಪೇಂದ್ರ ಅಭಿಮಾನಿಗಳನ್ನು ಮತ್ತೊಮ್ಮೆ ಚಿತ್ರಮಂದಿರಗಳತ್ತ ಓಡಿ ಬರುವಂತೆ ಮಾಡುವುದೇ ಕಾದು ನೋಡಬೇಕು.

ರಾಜ್‌ಕುಮಾರ್‌ ಅವರ ಹಳೆಯ ಚಿತ್ರಗಳ ಸ್ಟೈಲ್‌ನಲ್ಲಿ ಉಪೇಂದ್ರ ಕುಣಿಯುವ ‘ನಾನು ಜೀತೇಂದ್ರ...ನೀನು ಸಿರಿದೇವಿ...’ ಎಂಬ ನ್ಯೂಸ್‌ ಚಿತ್ರದ ಹಾಡು ಈಗಾಗಲೇ ಮಕ್ಕಳ ಪಾಲಿಗೆ ರಾಷ್ಟ್ರಗೀತೆಯಾಗಿದೆ. ಅಂದಹಾಗೆ ರೀಮಾಸೇನ್‌ ಮತ್ತು ರೇಣುಕಾ ಮೆನನ್‌ ಎಂಬ ಇಬ್ಬರು ಸುಂದರಿಯರು ಚಿತ್ರದಲ್ಲಿದ್ದಾರೆ.

ವಿದ್ಯಾ ಪಿಕ್ಚರ್ಸ್‌ ಲಾಂಛನದಲ್ಲಿ, ಗೋಪಿ ಮತ್ತು ಶ್ರೀರಾಮ್‌ಕುಮಾರ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎಂ.ಕೆ.ಮಹೇಶ್ವರ್‌ ಕತೆ, ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ.

ಚಿತ್ರರಂಗದಲ್ಲಿ ಹೂವು ಮತ್ತು ಮುಳ್ಳಿನ ಹಾದಿ ಎರಡನ್ನೂ ಬಲ್ಲ ಉಪೇಂದ್ರ, ‘ಗೌರಮ್ಮ’ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ರಿಮೇಕ್‌ ಹಾವಳಿಯ ಮಧ್ಯೆ ‘ನ್ಯೂಸ್‌’ ಎಂಬ ಸ್ವಮೇಕ್‌ ಚಿತ್ರ ಅದೃಷ್ಟ ಪರೀಕ್ಷೆಗಿಳಿದಿದೆ.

ಮತ್ತೊಂದು ಚಿತ್ರ : ಈ ವಾರ ಮಚ್ಚು-ಲಾಂಗ್‌ಗಳ ಮತ್ತೊಂದು ಚಿತ್ರ ತೆರೆಕಾಣುತ್ತಿದೆ. ಮೀಟರ್‌ ಇರೋರಿಗೆ ಮಾತ್ರ ಎನ್ನುವ ಎಚ್ಚರಿಕೆಯಾಂದಿಗೆ ‘ಮೆಂಟಲ್‌ ಮಂಜ’ ತೆರೆಗೆ ಬಂದಿದ್ದಾನೆ. ಅರ್ಜುನ್‌ ಎನ್ನುವ ಹೊಸ ಮುಖ ಆ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ರಚನೆಯಾಂದಿಗೆ ಸಾಯಿ ಸಾಗರ್‌ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಳವಳಿ ನಾರಾಯಣ್‌ ಚಿತ್ರವನ್ನು ನಿರ್ಮಿಸಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada